ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ವಿಶೇಷ ಪೂಜೆ

Untitled design (3)
ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ನಿಮಿತ್ತ ಯಲಬುರ್ಗಾದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕೃಷ್ಣವೇಣಿ ಅವರಿಂದ ರಂಗೋಲಿಯಲ್ಲಿ ಅರಳಿದ ರಾಯರ ಚಿತ್ರ.
Published on

ಯಲಬುರ್ಗಾ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ನಿಮಿತ್ತ ಶ್ರೀಗಳ ಬೃಂದಾವನಕ್ಕೆ ವಿಶೇಷ ಪೂಜೆ ನಡೆಯಿತು.


ಬೃಂದಾವನಕ್ಕೆ ಹೂವಿನ ಅಲಂಕಾರ, ಪಂಚಾಮೃತ ಅಭಿಷೇಕ ಮಾಡಲಾಯಿತು. ಅಷ್ಟೋತ್ತರ ಪಾರಾಯಣ, ಪ್ರವಚನ, ಸಂಗೀತ ಕಾರ್ಯಕ್ರಮ, ರಥೋತ್ಸವ, ಪಲ್ಲಕ್ಕಿ ಮತ್ತು ತೊಟ್ಟಿಲ ಸೇವೆ ನಡೆಯಿತು.

ಮುಧೋಳದ ಅಮೃತ ಲಕ್ಷ್ಮೀಯಿಂದ ಭರತ ನಾಟ್ಯ, ಭಜನಾ ಕಾರ್ಯಕ್ರಮ ಜರುಗಿದವು. ಶ್ರೀ ರಾಘವೇಂದ್ರ ಸ್ವಾಮಿಗಳು ವೀಣೆ ನುಡಿಸುತ್ತಿರುವ ಚಿತ್ರವನ್ನು ಬಾಲಕಿ ಕೃಷ್ಣವೇಣಿ ಜೋಶಿ ರಂಗೋಲಿಯಲ್ಲಿ ಬಿಡಿಸಿರುವುದು ಭಕ್ತರ ಗಮನ ಸೆಳೆಯಿತು.


ಪ್ರಮುಖರಾದ ಸುನೀಲ ಕುಲಕರ್ಣಿ, ಸುಧೀರ ಕೊರ್ಲಹಳ್ಳಿ, ವಸಂತರಾವ ಕುಲಕರ್ಣಿ, ವಿಜಯಕುಮಾರ ಗುಂಡೂರು, ರಾಜು ಕುಲಕರ್ಣಿ, ಗುರುರಾಜ ಪುರೋಹಿತ, ಯಂಕಣ್ಣ ಜೋಶಿ, ನಾರಾಯಣ ಗಂಗಾಖೇಡ, ಪವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net