ಋಷ್ಯಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ

SRI rrr
ಶೃಂಗೇರಿ ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಪ್ರಸಾದವನ್ನು ಅಯೋಧ್ಯೆಗೆ ಕಳುಹಿಸಲು ಶ್ರೀಮಠದ ಅರ್ಚಕ ಶಿವಕುಮಾರ ಶರ್ಮರಿಗೆ ನೀಡಲಾಯಿತು. ಡಿ.ಎನ್.ಜೀವರಾಜ್, ತಲಗಾರು ಉಮೇಶ್, ಎಚ್.ಕೆ.ನವೀನ್ ಇತರರಿದ್ದರು.
Published on

ಶೃಂಗೇರಿ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆ ಮುಂಚಿತವಾಗಿ ಕಿಗ್ಗಾ ದೇವಸ್ಥಾನದಲ್ಲಿ ಶ್ರೀ ಶಾಂತಾ ಸಮೇತ ಋಷ್ಯಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಅರ್ಚಕರು ಮತ್ತು ಪುರೋಹಿತರ ಪರಿಷತ್‌ನಿಂದ ಭಾನುವಾರ ಕಿಗ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಇತ್ತೀಚೆಗೆ ಪರಿಷತ್‌ನಿಂದ ಭೇಟಿ ಮಾಡಿ, ವಿಷಯ ಅರಿಕೆ ಮಾಡಿಕೊಂಡಾಗ ದೇವರ ಪ್ರಸಾದ ಕಳುಹಿಸಿಕೊಡಲು ಸೂಚಿಸಿದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಪ್ರಸಾದ ಕಳಿಸಲಾಗುತ್ತಿದೆ.
ಬೆಳಗ್ಗೆ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ರುದ್ರ ಪಾರಾಯಣ, ಪಂಚಾಮೃತ ಅಭಿಷೇಕ, ಪೂಜೆ ನಡೆಯಿತು. ಅರ್ಚಕ ಶಿವರಾಂ ಭಟ್ ನೇತೃತ್ವದ ತಂಡ ಪೂಜಾ ವಿಧಿವಿಧಾನ ನಡೆಸಿದರು. ಶ್ರೀಮಠದ ಅರ್ಚಕ ಶಿವಕುಮಾರ ಶರ್ಮಾ ಅವರಿಗೆ ದೇವರ ಪ್ರಸಾದ ಹಸ್ತಾಂತರಿಸಲಾಯಿತು. ಜ.15ರಂದು ಈಶ್ವರಗಿರಿ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದವನ್ನು ಅಯೋಧ್ಯೆಗೆ ಕಳಿಸಲಾಗುತ್ತದೆ.
ಮಾಜಿ ಸಚಿವ ಡಿ.ಎನ್.ಜೀವರಾಜ್, ಮುಖಂಡರಾದ ತಲಗಾರು ಉಮೇಶ್, ರಾಮಕೃಷ್ಣರಾವ್, ಎಚ್.ಕೆ.ನವೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net