ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ

CLK POOJE 27
Published on

ಚಳ್ಳಕೆರೆ: ತಾಲೂಕಿನ ರೇಖಲಗೆರೆ ಕಾವಲಿನಲ್ಲಿರುವ ಆಂಜನೇಯ ಸ್ವಾಮಿಗೆ ಶ್ರಾವಣ ಶನಿವಾರ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಅಭಿಷೇಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಸಾಲೆಹಳ್ಳಿ ಗ್ರಾಮದ ಭಕ್ತ ನಾರಾಯಣರೆಡ್ಡಿ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ವಿಗ್ರಹ ಸ್ಥಾಪನೆ: ಆಂಜನೇಯಸ್ವಾಮಿಯ ಭಕ್ತರಾದ ಬೆಂಗಳೂರಿನ ನಿವೃತ್ತ ಬ್ಯಾಂಕ್ ಅಧಿಕಾರಿ ಆರ್.ಜಿ.ಸ್ವಾಮಿ ಅವರು 7 ಲಕ್ಷ ರೂ. ವೆಚ್ಚದಲ್ಲಿ ಸೆ.3ರಂದು ಭಾನುವಾರ ಸ್ವಾಮಿಗೆ ನವಗ್ರಹ ವಿಗ್ರಹ ಸ್ಥಾಪನೆ ಮತ್ತು ದೇವಾಲಯ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ದೇವಾಲಯ ಸಮಿತಿಯ ತೊರೆಕೋಲಮ್ಮನಹಳ್ಳಿ ಪೀತಾಂಬರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net