

ಮುಂಡಗೋಡ: ನಾಗರಪಂಚಮಿ ನಿಮಿತ್ತ ನಾಗರ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲು ಹಾಕಿದರು. ಪಟ್ಟಣದ ವಿವಿಧೆಡೆ ಇರುವ ನಾಗರ ದೇವಸ್ಥಾನ ಹಾಗೂ ನಾಗರ ಕಲ್ಲಿನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹಾಲು ಎರೆದರು. ರೈತ ಕುಟುಂಬದವರು ಮಣ್ಣಿನಿಂದ ನಾಗರ ಮೂರ್ತಿ ಮಾಡಿ ಮನೆಗಳಲ್ಲಿ ಪೂಜೆ ಸಲ್ಲಿಸಿ ಹಾಲೆರೆದರು. ಮನೆಗಳಲ್ಲಿ ವಿವಿಧ ಬಗೆಯ ಉಂಡಿ (ಲಾಡು)ಗಳನ್ನು ಮಾಡಿ ತಿನ್ನುವುದು. ಹಬ್ಬದ ದಿನದಂದು ಮಹಿಳೆಯರು ಹಾಗೂ ಮಕ್ಕಳು ಹೊಸ ಉಡುಗೆ ತೊಟ್ಟು ಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿದರು.