

ಎನ್.ಆರ್. ಪುರ: ಹಳೇ ಪೇಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಗೋಕುಲಾಷ್ಠಮಿ ಪ್ರಯುಕ್ತ ಸೋಮವಾರ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ ವೇಣು ಗೋಪಾಲಸ್ವಾಮಿಗೆ ರುದ್ರಾಭಿಷೇಕ, ಪವಮಾನ ಅಭಿಷೇಕ,ಬೆಳ್ಳಿ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ನೂರಾರು ಭಕ್ತರು ಆಗಮಿಸಿ ವೇಣು ಗೋಪಾಲನಿಗೆ ಪೂಜೆ ಸಲ್ಲಿಸಿದರು. ಮಂಗಳವಾರ ವೇಣುಗೋಪಾಲ ದೇವಸ್ಥಾನದಲ್ಲಿ ಪವಮಾನ ಅಭಿಷೇಕ, ರುದ್ರಾಭಿಷೇಕ, ದೇವಸ್ಥಾನದ ಆವರಣದಲ್ಲಿ ರಥಾರೋಹಣ, ಕೃಷ್ಣನನ್ನು ತೊಟ್ಟಿಲು ಹಾಕುವ ಕಾರ್ಯಕ್ರಮ, ವಿಶೇಷ ಪೂಜೆ, ಕೃಷ್ಣನಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಸೀತೂರಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅರ್ಘ್ಯ ಪ್ರಧಾನ, ವಿಷ್ಣು ಅಷ್ಟೋತ್ತರ ಪಠಣ, ಕೃಷ್ಣ ಅಷ್ಟೋತ್ತರ ಪಠಣ, ವಿಶೇಷ ಪೂಜೆ, ಮಹಾಗಳಾರತಿ ನಡೆಯಿತು.ರಾತ್ರಿ ಸಹ ವಿಶೇಷ ಪೂಜೆ ನಡೆಯಿತು. ಮನೆ, ಮನೆಗಳಲ್ಲೂ ಗೋಕುಲಾಷ್ಟಮಿ ಪ್ರಯಕ್ತ ಕೃಷ್ಣನಿಗೆ ವಿಶೇಷ ಪೂಜೆ,ಬೆಣ್ಣೆ ನೈವಿದ್ಯೆ, ಅಲಂಕಾರ, ಮಂಗಳಾರತಿ ನಡೆಯಿತು.