ನವರಾತ್ರಿ ಹಬ್ಬದ ಸಂಭ್ರಮ: ಕೌಡ್ಲೆ ಪಟ್ಟಲದಮ್ಮ ದೇವಿಗೆ ವಿಶೇಷ ಪೂಜೆ

Special Puja to Goddess Kowdle Pattaladamma Mandya
Published on

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮದ ಪಟ್ಟಲದಮ್ಮ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ದೇವಿಗೆ ಅನ್ನಪೂಣೇಶ್ವರಿ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ನವೀನ್ ಶ್ರೀ ಗೋಪಾಲ್ ನೇತೃತ್ವದಲ್ಲಿ ಬೆಳಗ್ಗೆಯಿಂದ ಧಾರ್ಮಿಕ ಕೈಂಕರ್ಯ ನಡೆಯಿತು. ಮಹಾಮಂಗಳಾರತಿ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಉದ್ಯಮಿ ಚಿತ್ರಾ ರಮೇಶ್, ದಾನಿಗಳಾದ ಗೋಪಾಲ್, ರಘು, ಯಜಮಾನರಾದ ಶ್ರೀನಿವಾಸ್, ನಾರಾಯಣಸ್ವಾಮಿ, ಶ್ರೀಧರ್, ರಾಜೀವ್, ಭರತ್ ಇತರರಿದ್ದರು.

ನವರಾತ್ರಿ ಹಬ್ಬದ ಅಂಗವಾಗಿ ದೇವಿಗೆ ಸೆ.27ರಂದು ವೀಳ್ಯದೆಲೆ ಅಲಂಕಾರ, 28ರಂದು ದುರ್ಗಾದೇವಿ, 29ರಂದು ಗೌರಿ ಗಣೇಶ, 30ರಂದು ಧಾನ್ಯಲಕ್ಷ್ಮೀ, ಅ.1ರಂದು ಧನಲಕ್ಷ್ಮೀ ಹಾಗೂ 2ರಂದು ಸರಸ್ವತಿ ಅಲಂಕಾರ ಮಾಡಲಾಗುವುದು. ಮಾತ್ರವಲ್ಲದೆ ಪ್ರತಿದಿನ ಸಂಜೆ ಸಂಕಲ್ಪ ಸೇವೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net