ಬೇಲೂರಲ್ಲಿ ಬನ್ನಿಮರಕ್ಕೆ ವಿಶೇಷ ಪೂಜೆ

25blrp3
ವಿಜಯದಶಮಿ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇವರಿಗೆ ಬನ್ನಿಮಂಟಪದಲ್ಲಿ ಅರ್ಚಕರು ಪೂಜೆ ಸಲ್ಲಿಸುತ್ತಿರುವುದು.
Published on

ಬೇಲೂರು: ವಿಜಯದಶಮಿ ಅಂಗವಾಗಿ ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇವರನ್ನು ಆಶ್ವಾರೂಢ ಮಂಟಪ ಮೂಲಕ ಮಂಗಳವಾರ ಸಂಜೆ ಪಟ್ಟಣ ಸಮೀಪದ ಬಂಟೇನಹಳ್ಳಿಯಲ್ಲಿರುವ ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ತಂದು ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಚನ್ನಕೇಶವಸ್ವಾಮಿ ಉತ್ಸವ ಮೂರ್ತಿಯನ್ನು ಟ್ರಾೃಕ್ಟರ್‌ನಲ್ಲಿ ಇರಿಸಿ ಪಟ್ಟಣ ಸಮೀಪದ ಬಂಟೇನಹಳ್ಳಿಯಲ್ಲಿರುವ ದೇಗುಲದ ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ತಂದು ಪೂಜೆ ಸಲ್ಲಿಸಲಾಯಿತು. ನಂತರ ದೇಗುಲದ ಸಾಂಪ್ರದಾಯದಂತೆ ನೂರಾರು ಭಕ್ತರ ಸಮ್ಮುಖದಲ್ಲಿ ದೇಗುಲದ ವಿವಿಧ ಆಯುಧಗಳು, ದೇಗುಲ ಮತ್ತು ಕೊಠಡಿಗಳ ಬೀಗದ ಕೀಗಳು, ಇತರ ಪರಿಕರಗಳಿಗೆ ಅರ್ಚಕರು ಪೂಜೆ ಸಲ್ಲಿಸಿದರು. ನಂತರ ಅರ್ಚಕರೊಬ್ಬರು ಬನ್ನಿಮರದ ಸೊಪ್ಪನ್ನು ಕಡಿದು ದೇವರಿಗೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿ, ಶಮಿಪೂಜೆಗೆ ನೆರೆದಿದ್ದ ಭಕ್ತರಿಗೆ ಬನ್ನಿ ಸೊಪ್ಪು ವಿತರಿಸಿದರು.

ಇದೇ ಸಂದರ್ಭ ನೆರೆದಿದ್ದ ಭಕ್ತರಿಗೆ ಪ್ರತಿ ವರ್ಷದಂತೆ ಅರುಸು ವಂಶಸದ್ಥರು ಪ್ರಸಾದ ವಿನಿಯೋಗ ಮಾಡಿದರು. ತಹಸೀಲ್ದಾರ್ ಎಂ.ಮಮತಾ, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ,ಆರಾಯಣಸ್ವಾಮಿ, ಇಒ ಯೋಗೀಶ್, ಅರ್ಚಕರಾದ ಶ್ರೀನಿವಾಸ್ ಭಟ್ಟರ್, ನರಸಿಂಹ ಪ್ರಿಯ ಭಟ್ಟರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net