ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

03M.D.R.2
ಮದ್ದೂರು ತಾಲೂಕಿನ ಪುರಾಣ ಪ್ರಸಿದ್ಧ ವೈದ್ಯನಾಥಪುರದ ವೈದ್ಯನಾಥೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಮದ್ದೂರು: ಕಾರ್ತಿಕ ಮಾಸದ ಎರಡನೇ ಕಾರ್ತಿಕ ಸೋಮವಾರ ಅಂಗವಾಗಿ ತಾಲೂಕು ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆಯಿಂದಲೇ ತಾಲೂಕಿನ ಸೋಮನಹಳ್ಳಿಯ ಶ್ರೀ ಮಹದೇಶ್ವರಸ್ವಾಮಿ, ಚನ್ನೇಗೌಡನದೊಡ್ಡಿ ಮಹದೇಶ್ವರ ಹಾಗೂ ಮುತ್ತುರಾಯಸ್ವಾಮಿ, ಆಲೂರು ಬೀರೇಶ್ವರ, ಚಾಪುರದೊಡ್ಡಿ ಮಹದೇಶ್ವರಸ್ವಾಮಿ ಸೇರಿದಂತೆ ಪಟ್ಟಣ ವ್ಯಾಪ್ತಿಯ ಹಳೇ ಬಸ್ ನಿಲ್ದಾಣದ ಬಳಿಯಿರುವ ಕಾಶಿವಿಶ್ವೇಶ್ವರ ವಿಶಾಲಾಕ್ಷಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯ ನಡೆಯಿತು.

ಪುರಾಣ ಪ್ರಸಿದ್ಧ ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ದೇವಾಲಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಶಿಂಷಾ ನದಿಯಲ್ಲಿ ಮಿಂದೆದ್ದ ಬಳಿಕ ಹರಕೆ ಸಲ್ಲಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net