

ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್ ಸಮೀಪ ಕಣಿವೆ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಮಂಗಳವಾರ ಶ್ರೀವೀರಭದ್ರೇಶ್ವರ ಜಯಂತಿಯ ಅಂಗವಾಗಿ ವೀರಶೈವ ಬೀಗ್ರೇಡ್ ವತಿಯಿಂದ ವಿಶೇಷಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಬ್ರಿಗೇಡ್ ಸ್ಥಾಪಕ ಪಿ.ಚಂದ್ರಮೌಳಿ, ಶ್ರೀ ವೀರಭದ್ರ ಸ್ವಾಮಿಯ ಜನ್ಮದಿನವು ಸೆಪ್ಟೆಂಬರ್ ಮೊದಲ ವಾರದ ಮೂರನೇ ದಿನವಾಗಿದೆ. ಹೀಗಾಗಿ ಸ್ವಾಮಿಯ ಜಯಂತಿಯನ್ನು ದೇಶಾದ್ಯಂತ ವಿಜೃಂಭಣೆಯಿAದ, ಭಕ್ತಿಯಿಂದ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯಾದ್ಯಂತ ವೀರಭದ್ರಸ್ವಾಮಿಯ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವೀರಭದ್ರಸ್ವಾಮಿ ಎಲ್ಲ ವರ್ಗದ ಜನರ ಪಾಲಿನÀ ಆರಾಧ್ಯ ದೈವವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಜಿ.ವೀರೇಶ್, ವೀರಶೈವ ಪತ್ತಿನ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಓAಕರಸ್ವಾಮಿ, ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಯ್ಯ, ನಗರ ವೀರಶೈವ ಸಮಾಜದ ಅಧ್ಯಕ್ಷ ಸಿ.ಆರ್.ಅಶೋಕ್, ಮೂಡಿಗೆರೆ ಬಿಜೆಪಿ ಮುಖಂಡ ವಿನೋದ್ ಕಣಚೂರು, ಪ್ರದೀಪ್, ಸಮಾಜದ ಹಿರಿಯರಾದ ದಿನೇಶ್ ದೋಣಿಕಣ, ಶಂಕರ್, ದಿನೇಶ್, ಪ್ರಧಾನ ಅರ್ಚಕ ಪಂಚಾಕ್ಷರಯ್ಯ, ಶಿವಲಿಂಗಯ್ಯ ಇದ್ದರು.