ಶ್ರಾವಣ ಸೋಮವಾರ ವಿಶೇಷ ಪೂಜೆ

GKN Shravana
Published on

ಗೋಕರ್ಣ: ಶ್ರಾವಣದ ಕೊನೆ ಸೋಮವಾರ ನಿಮಿತ್ತ ಶ್ರೀಮಹಾಬಲೇಶ್ವರ ಆತ್ಮಲಿಂಗಕ್ಕೆ ಮಂದಿರದ ಪ್ರಧಾನ ಅರ್ಚಕ ವೇ.ಚಂದ್ರಶೇಖರ ಅಡಿ ನೇತೃತ್ವದಲ್ಲಿ ವಿಶೇಷ ಕಟ್ಟಳೆ ಮತ್ತು ಮಹಾಪೂಜೆ ನೆರವೇರಿತು.

ಇದಕ್ಕೂ ಮುನ್ನ ಕ್ಷೇತ್ರದ ಮುಖ್ಯ ಅರ್ಚಕರು ಹಾಗೂ ಉಪಾಧಿವಂತ ವೈದಿಕರಿಂದ ರುದ್ರಾನುಷ್ಠಾನ ನಡೆಯಿತು. ಮಹಾಪೂಜೆಯಲ್ಲಿ ಮಂದಿರ ಸಮಿತಿಯ ಸದಸ್ಯರಾದ ವೇ.ಗಣಪತಿ ಶಿವರಾಮ ಹಿರೇ, ವೇ.ಪರಮೇಶ್ವರ ಪ್ರಸಾದ ರಮಣಿ, ವೇ. ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ, ಪ್ರಧಾನ ಅರ್ಚಕ ವೇ. ಗಣಪತಿ ಗಜಾನನ ಹಿರೇ, ವೇ.ಶ್ರೀನಿವಾಸ ಅಡಿ, ವೇ.ಶ್ರೀನಾಗ ಅಡಿ, ಮಹಾಗಣಪತಿ ಮಂದಿರದ ಪ್ರಧಾನ ಅರ್ಚಕ ವೇ. ಪರಮೇಶ್ವರ ಶಂಕರಲಿಂಗ, ವೇ. ನಾರಾಯಣ ದೀಕ್ಷಿತ, ವೇ.ಶಿವರಾಮ ಗೋಪಿ, ಪಂಚ ಉಪಾಧಿವಂತ ಪ್ರಮುಖ ಕುಮಾರ ಗೋಪಿ, ವೇ.ರವಿ ಸೂರಿ, ವೇ.ಅನಂತ ಹಾವಗೋಡಿ, ಉಪಾಧಿವಂತ ಪಂಡಿತ ಮನೆತನದ ಗಣಪತಿ ಪಂಡಿತ, ವೇ.ನಾಗರಾಜ ಐತಾಳ, ವೇ.ವಿನಾಯಕ ಚಿತ್ರಿಗೆಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net