ನವರಾತ್ರಿ ಅಂಗವಾಗಿ ಇಂದಿನಿಂದ ವಿಶೇಷ ಪೂಜೆ

14M.D.R.1 (1)
ವಿಶಾಲಾಕ್ಷಿ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಿರುವುದು.
Published on

ಮದ್ದೂರು: ಪಟ್ಣಣದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ಹಾಗೂ ವಿಶಾಲಾಕ್ಷಿ ಅಮ್ಮನವರ ದೇವಾಲಯಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಪ್ರದಾನ ಅರ್ಚಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.

ನವರಾತ್ರಿ ಅಂಗವಾಗಿ ಅ.15ರಿಂದ 9 ದಿನ ದೇವಾಲಯದಲ್ಲಿ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ನಿತ್ಯ ದೇವರನ್ನು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗುತ್ತದೆ. ಇದರೊಂದಿಗೆ ಮಹಾ ಮಂಗಳಾರತಿ, ಲಲಿತಾ ಸಹಸ್ರನಾಮ, ದೇವಿ ಪಾರಾಯಣ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸಹಾಯಕ ಅರ್ಚಕ ನರಸಿಂಹ ಪ್ರಸಾದ್, ಸಮಾಜ ಸೇವಕ ವಾದಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net