ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ

12-11-Shiva-5
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನರಕ ಚತುರ್ದಶಿ ನಿಮಿತ್ತ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಭಾನುವಾರ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿದರು.
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನರಕ ಚತುರ್ದಶಿ ನಿಮಿತ್ತ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಭಾನುವಾರ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ಹಾಗೂ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಿದರು.
ಶ್ರೀಗಳ ಬೆಳಗ್ಗೆ ತೈಲ ಅಭ್ಯಂಜನ, ತುಳಸಿ ಹಾಗೂ ಗೋಪೂಜೆ ನೆರವೇರಿಸಿ ಮೂಲ ರಾಮದೇವರ ಪೂಜೆ ನೆರವೇರಿಸಿ ಭಕ್ತರಿಗೆ ಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net