

ಕೊಕ್ಕರ್ಣೆ: ಹರಿಖಂಡಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಪ್ರಯುಕ್ತ ಶ್ರೀ ಸಂಸ್ಥಾನ ದೇವರಿಗೆ ಉಷಾ ಪೂಜೆ, ಶ್ರೀ ದೇವರಿಗೆ ಪ್ರಸನ್ನ ಪೂಜೆ ನೆರವೇರಿತು. ನಂತರ ಮಠದಲ್ಲಿ 48 ಗಂಟೆಗಳ ಅಖಂಡ ಭಜನೆಗೆ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಮಧ್ಯಾಹ್ನ ದೇವರಿಗೆ ತುಳಸಿ ಅರ್ಚನೆ, ಮಠದಲ್ಲಿ ಪವವಾನ ಕಲಶಾಭಿಷೇಕ, ಮಹಾಪೂಜೆ, ಏಕಾದಶಿ ಪ್ರಯುಕ್ತ ಫಲಾಹಾರ, ಸಂಸ್ಥಾನ ದೇವರಿಗೆ ರಾತ್ರಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಆಡಳಿತ ಮೊಕ್ತೇಸರ ಎಂ.ದಿನೇಶ್ ಪೈ ಮತ್ತು ಶ್ರೀ ಸುಧಿಂದ್ರ ತೀರ್ಥ ಕಲಾಮಂದಿರ ಜೀರ್ಣೋದ್ಧಾರ ಮಂಡಳಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸದಸ್ಯರು, ಅರ್ಚಕರು, ಶ್ರೀ ಲಕ್ಷ್ಮೀವೆಂಕಟರಮಣ ಮಹಿಳಾ ಮಂಡಳಿ, ಭಜನಾ ಮಂಡಳಿ, ಯುವಕ ಮಂಡಲ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.