ಸೇನೆಗೆ ಒಳಿತಾಗಲೆಂದು ವಿಶೇಷ ಪೂಜೆ: ಆಪರೇಷನ್ ಸಿಂಧೂರ ಯಶಸ್ವಿಗೆ ಸಂತಸ

Special Puja by BJP workers Mandya
Published on

ಮಂಡ್ಯ: ಉಗ್ರರ ನೆಲೆಯನ್ನು ಧ್ವಂಸಗೊಳಿಸಿ ಆಪರೇಷನ್ ಸಿಂಧೂರ ಯಶಸ್ವಿಯಾದ ಹಾಗೂ ಭಾರತೀಯ ಸೈನಿಕರಿಗೆ ಒಳಿತಾಲೆಂದು ಪ್ರಾರ್ಥಿಸಿ ನಗರ ಹಾಗೂ ತಾಲೂಕಿನ ಕೆರಗೋಡು ಗ್ರಾಮದಲ್ಲಿ ದೇಶಪ್ರೇಮಿಗಳು ಮತ್ತು ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಇಲ್ಲಿನ ವಿದ್ಯಾಗಣಪತಿ ದೇವಾಲಯ ಸೈನಿಕ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಬಿಜೆಪಿ ನಗರ ಘಟಕ ಅಧ್ಯಕ್ಷ ವಸಂತ್ ಮಾತನಾಡಿ, ದೇಶದ ಶತ್ರುಗಳ ಸಂಹಾರದ ಜತೆಗೆ ನಮ್ಮ ಸೈನಿಕರ ಶಕ್ತಿಗಾಗಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ನಮ್ಮ ಹೆಣ್ಣು ಮಕ್ಕಳ ಸಿಂಧೂರ ತೆಗೆಯಲು ಬಂದವರನ್ನು ಹಾಗೂ ನಾಶ ಮಾಡಲು ಬಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅವರು ಮಹಾಸಂಹಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಭಾರತದ ಕೂಸು ಪಾಕಿಸ್ತಾನವು ಇಂದು ತನ್ನ ತಾಯಿಬೇರನ್ನೇ ಕತ್ತರಿಸಲು ಬಂದಿದೆ. ಉಗ್ರರ ಮೂಲಕ ಉಪಟಳ, ಸೈನಿಕರ ಪ್ರಾಣಹಾನಿ ಮಾಡಲು ಸಂಚು ರೂಪಿಸುತ್ತಲೇ ಬರುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ನಮ್ಮ ಸೈನಿಕರು ಸನ್ನದ್ದರಾಗಿ ಉತ್ತರ ನೀಡುತ್ತಿದ್ದಾರೆ. ಸೈನಿಕರು ಮತ್ತು ರೈತರು ದೇಶ ಎರಡು ಕಣ್ಣುಗಳಿಂತೆ. ಅವರ ರಕ್ಷಣೆ ಮತ್ತು ಪೋಷಣೆ ಎಲ್ಲರ ಜವಾಬ್ದಾರಿ. ಇಂದು ಸೈನ್ಯಕ್ಕೆ ಆತ್ಮಸ್ಥೈಬರ್ಯ ತುಂಬಲು ದೇವರ ಮೊರೆ ಹೋಗಿದ್ದೇವೆ. ದೈವಬಲ, ಜನಬಲ ಸೈನಿಕರಿಗೆ ತುಂಬೋಣ ಎಂದು ಮನವಿ ಮಾಡಿದರು.

ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ಸಂಚಾಲಕ ನಾಗನಂದ, ಕೇಶವ್, ಎಂ.ಬಿ.ರಮೇಶ್, ಆನಂದ್, ಸಿದ್ದರಾಜುಗೌಡ, ಪುಟ್ಟಸ್ವಾಮಿ, ಶಂಕರ್, ಶಿವಲಿಂಗು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net