

ರಟ್ಟಿಹಳ್ಳಿ: ಪಟ್ಟಣದ ನಾಮದೇವ ಸಿಂಪಿ ಸಮಾಜದ ವತಿಯಿಂದ ಶ್ರೀ ವಿಠ್ಠಲ-ರಖುಮಾಯಿ ದೇವಸ್ಥಾನದಲ್ಲಿ ಕಾರ್ತಿಕ ಏಕಾದಶಿ ನಿಮಿತ್ತ ವಿಶೇಷ ಪೂಜೆ ಮತ್ತು ಧಾರ್ವಿುಕ ಕಾರ್ಯಕ್ರಮಗಳು ನೆರವೇರಿತು.
ಬೆಳಗ್ಗೆ ಕಾಕಡಾರತಿ, ಭಜನೆ ಇತರೆ ಧಾರ್ವಿುಕ ವಿಧಿಗಳನ್ನು ಆಚರಿಸಲಾಯಿತು. ಸಮಾಜದ ಅಧ್ಯಕ್ಷ ಜ್ಞಾನೇಶ ಬೊಂಗಾಳೆ, ಎನ್.ಸಿ. ಕಠಾರೆ, ರಾಜಕುಮಾರ ಹೇಂದ್ರೆ, ಜಿ.ಆರ್. ಶಿಗ್ಗಾಂವಕರ, ರಮೇಶ ಬಾಬಾಜಿಯವರ, ಮಾಲತೇಶ ಮಹೇಂದ್ರಕರ, ರಾಜು ಧಾವಸ್ಕರ, ವಿಠ್ಠಲ ನಾಮದೇವ, ಪ್ರಶಾಂತ ಕಠಾರೆ, ಅನ್ನಪೂರ್ಣ ಹೇಂದ್ರೆ, ಗೀತಾಬಾಯಿ ಶಿಗ್ಗಾಂವಕರ, ಜೀಜಾಬಾಯಿ ಉರಣಕರ, ಉಮೇಶ ಭೀಮಪ್ಪನವರ, ಶಂಕರ ಅಂಗಡಿ, ಶಶಿಧರ ಪುಜಾರ ಇತರರು ಉಪಸ್ಥಿತರಿದ್ದರು.