ಶ್ರೀವಿಠ್ಠಲ ದೇವಸ್ಥಾನದಲ್ಲಿ ವಿಶೇಷ ಪೂಜೆ

Untitled design (5)
ಬಳ್ಳಾರಿಯ ರಾಯಲ್ ಕಾಲನಿಯಲ್ಲಿರುವ ಶ್ರೀವಿಠಲ ಕೃಷ್ಣ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಬಳ್ಳಾರಿ: ನಗರದ ರಾಯಲ್ ಕಾಲನಿಯಲ್ಲಿರುವ ಶ್ರೀವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಬುಧವಾರ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು.


ಶ್ರೀಕೃಷ್ಣನನ್ನು ಉಯ್ಯಲೆಯಲ್ಲಿ ಇರಿಸಿ ತೂಗುವ ಮೂಲಕ ಸುಮಂಗಲೆಯರು ಲಾಲಿ ಹಾಡು ಹಾಡಿದರು. ಚಿಣ್ಣರು ಕೂಡ ಶ್ರೀಕೃಷ್ಣ ನಾಮಸ್ಮರಣೆಯ ಕೀರ್ತನೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ಸುಪ್ರಭಾತ ನಿರ್ಮಲ್ಯಾಭಿಷೇಕ ಬಳಿಕ ಕೃಷ್ಣನಿಗೆ ಆರತಿ ಬೆಳಗಿ ಸ್ವಾಗತಿಸುವುದು, ಮಹಾಭಿಷೇಕ, ಪಂಚಾಮೃತಭಿಷೇಕ ಮಾಡಲಾಯಿತು.

ಕೃಷ್ಣನ ಅಲಂಕಾರದ ಬಳಿಕ ಕೃಷ್ಣನ ಉತ್ಸವ ಮೂರ್ತಿಯನ್ನು ನಗರ ಪ್ರದಕ್ಷಿಣೆ ಮಾಡುವ ಮೂಲಕ ಮನೆ ಮನೆಗೂ ಕರೆದೊಯ್ಯಲಾಯಿತು. ಭಕ್ತರು ಹಾಲು ಮೊಸರು ನೀಡಿ ಆರತಿ ಬೆಳಗಿದರು. ಮಹಿಳೆಯರು ಕೋಲಾಟದ ಜತೆಗೆ ಭಕ್ತಿ ಗೀತೆಗಳನ್ನು ಹಾಡಿ ಸಂಭ್ರಮಿಸಿದರು.

ರಾಯಚೂರಿನ ಮಾಧವಾಚಾರ್ಯ ಜೋಷಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ ರಾವ್, ರಘುರಾಮ, ಉದಯ, ಪ್ರಾಣೇಶ್ ರಾಘವೇಂದ್ರ, ವೆಂಕಟೇಶ್, ಶೋಭಾರಾಣಿ, ಸುನೀತಾ, ಕವಿತಾ, ಮಮತಾ, ಹರಿಪ್ರಿಯಾ, ವೇದಾವತಿ, ವೀಣಾ, ಲಕ್ಷ್ಮೀ, ವಿಜಯಲಕ್ಷ್ಮೀ, ಪೂರ್ಣಿಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net