ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

15sunti01
ಸುಂಟಿಕೊಪ್ಪದ ಗರಗಂದೂರಿನ ಶ್ರೀ ಮಲಿಕಾರ್ಜುನ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಹಬ್ಬದ ವಿಶೇಷ ಪೂಜೆ ನಡೆಯಿತು.
Published on

ಸುಂಟಿಕೊಪ್ಪ: ಗರಗಂದೂರಿನ ಮಲಿಕಾರ್ಜುನ ನಗರದ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಾತಿ ಹಬ್ಬವನ್ನು ಶೃದ್ಧಾಭಕ್ತಿಯಿಂದ ನೇರವೇರಿಸಲಾಯಿತು.

ಮಂಗಳವಾರ ಮಕರ ಸಂಕ್ರಾತಿಯ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಲಾಗಿದ್ದು, ಬೆಳಗ್ಗಿನಿಂದಲೇ ವಿಶೇಷಪೂಜೆಗಳನ್ನು ಶ್ರೀ ಮಲಿಕಾರ್ಜುನ ಮತ್ತು ಶ್ರೀ ಚಾಮುಂಡೇಶ್ವರಿ ಪರಿವಾರ ದೇವರುಗಳಿಗೆ ನೇರವೇರಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ತೀರ್ಥ, ಗಂಧ, ಪ್ರಸಾದ ಹಾಗೂ ಪಾಯಸ ಪ್ರಸಾದವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net