

ಮೂಗೂರು: ‘ವಾಟಳು ಹೂವಿನ ಚಪ್ಪರ’ ಎಂದೇ ಪ್ರಸಿದ್ಧಿ ಪಡೆದ ವಾಟಳು ಗ್ರಾಮದ ಶ್ರೀ ಬಲ್ಲೇಶ್ವರಸ್ವಾಮಿ ದೇಗುಲದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಭಾನುವಾರ ನಡೆದ ವಿಶೇಷ ಪೂಜೆಗೆ ಸಾವಿರಾರು ಭಕ್ತರು ಆಗಮಿಸಿದ ಹಿನ್ನೆಲೆ ದೇವಾಲಯ ಸುತ್ತಮುತ್ತ ಜಾತ್ರೆಯಂತೆ ಭಾಸವಾಗುತ್ತಿತ್ತು.
ಗ್ರಾಮದ ಶ್ರೀ ಬಲ್ಲೇಶ್ವರಸ್ವಾಮಿ ಹಾಗೂ ಕನ್ನಮ್ಮ ದೇವರು ಅಪಾರ ಭಕ್ತರನ್ನು ಹೊಂದಿದ್ದು, ಜಿಲ್ಲೆಯ ವಿವಿಧ ಭಾಗದಿಂದ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ ನಡೆಯಿತು. ಬೆಟ್ಟ ಹಾಗೂ ಗ್ರಾಮದ ಬಳಿ ಇರುವ ಶ್ರೀ ಕನ್ನಮ್ಮನ ಒಕ್ಕಲಿನವರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.