ಶ್ರೀ ಅಂತರಘಟ್ಟಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

24 BIRUR 01
Published on

ಬೀರೂರು: ಬೀರೂರಿನ ಕರಗಲ್ ಬೀದಿಯ ಗ್ರಾಮ ದೇವತೆ ಶ್ರೀಅಂತರಘಟ್ಟಮ್ಮ ದೇವಿಯವರ ದೇವಸ್ಥಾನದ ಜೀರ್ಣೋದ್ದಾರಗೊಂಡ ಹಿನ್ನಲೆಯಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಗಂಗಾಪೂಜೆ , ಪುಣ್ಯಾಹ, ಪಂಚಕಲಶ ಪೂಜೆ, ನವಗ್ರಹ, ವಾಸ್ತು, ನಾಂದಿ ದೇವತಾ ಪೂಜೆ, ದೇವಿ ಕಲಶಪೂಜೆ, ಅಭಿಷೇಕ, ನಂತರ ಕುಂಕುಮ ಪೂಜೆ, ಮಹಾ ಮಂಗಳಾರತಿ ಮತ್ತು ಸಾಯಂಕಾಲ ದೀಪೋತ್ಸವ, ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಗಂಗಾಪೂಜೆ, ದೇವಿ ಪ್ರವೇಶ ನಂತರ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾಹೋಮ ಪೂರ್ಣಾಹುತಿ, ಬಲಿಪೂಜೆ, ದೃಷ್ಟಿಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಮಂಗಳ ವಾದ್ಯಗಳೊಂದಿಗೆ ಅಮ್ಮನವರ ಉತ್ಸವ ನಡೆಸಿ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗಿರೀಶ್ ಆರಾಧ್ಯ ಶಾಸಿ ಮತ್ತು ಕುಮಾರಶಾಸಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net