

ನಗರದ ಕಾಳಿದಾಸ ರಸ್ತೆಯ ಶ್ರೀ ಯದುಗಿರಿ ಯತಿರಾಜ ಮಠದ ಶಾಖೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಆ.22ರಂದು ಮಂಗಳವಾರ ಸ್ವಾತಿ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 8ಕ್ಕೆ ಸಂಕಲ್ಪ, 9ಕ್ಕೆ ಅಭಿಷೇಕ, 10.30ಕ್ಕೆ ಅಲಂಕಾರ, 11.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಶಾತ್ತುಮೊರೈ, 1 ಗಂಟೆಗೆ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಸಂಜೆ 7.30ಕ್ಕೆ ಪ್ರಾಕಾರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ವಿದ್ವಾನ್ ಕೆ.ಆರ್.ಯೋಗನರಸಿಂಹನ್ (ಮುರುಳಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.