

ಕೊಕ್ಕರ್ಣೆ: ಹರಿಖಂಡಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧಿಪತಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಮೊಕ್ಕಾಂ ಪ್ರಯುಕ್ತ ಮಠದಲ್ಲಿ ಉಷಾಪೂಜೆ, ಅಷ್ಟೋತ್ತರ ಶತ ಪ್ರದಕ್ಷಿಣೆ ನಮಸ್ಕಾರ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ಸೋಮವಾರ ನೆರವೇರಿದವು. ಮಧ್ಯಾಹ್ನ ಮಹಾಪೂಜೆ, ರಾತ್ರಿ ಪೂಜೆ ಭಿಕ್ಷಾ ಸೇವೆ, ಪಾದಪೂಜೆ, ಸಮಾರಾಧನೆ ಜರುಗಿತು. ಬಳಿಕ ಮುಂದಿನ ಮೊಕ್ಕಾಂಗೆ ಶ್ರೀಗಳನ್ನು ಬೀಳ್ಕೊಡಲಾಯಿತು.
ಆಡಳಿತ ಮೊಕ್ತೇಸರ ಎಂ.ದಿನೇಶ್ ಪೈ, ಶ್ರೀ ಸುಧಿಂದ್ರ ತೀರ್ಥ ಕಲಾಮಂದಿರ ಜೀರ್ಣೋದ್ಧಾರ ಮಂಡಳಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸದಸ್ಯರು, ಅರ್ಚಕರು, ಶ್ರೀಲಕ್ಷ್ಮೀವೆಂಕಟರಮಣ ಮಹಿಳಾ ಮಂಡಳಿ, ಭಜನಾ ಮಂಡಳಿ, ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು.