ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ

28sunti01
Published on

ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಕೂರು ಗ್ರಾಮದ ಶಾಂತಿಗೇರಿ ತೋಟದಲ್ಲಿ ನೆಲೆಗೊಂಡಿರುವ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.


ಶುಕ್ರವಾರ ಬೆಳಗ್ಗೆ 12ಗಂಟೆಗೆ ಗಂಧ ಪ್ರಸಾದ ಸ್ವೀಕಾರದೊಂದಿಗೆ ಅರ್ಚನೆ, ದೀಪಾರಾಧನೆ, ಮಹಾ ಮಂಗಳಾತಿ, ಹಣ್ಣುಕಾಯಿ ಅರ್ಪಿಸಲಾಯಿತು. ಚಾಮುಂಡೇಶ್ವರಿ ದೇವಿಯ ವಾರ್ಷಿಕ ಪೂಜೆ ಕೈಂಕಾರ್ಯಗಳನ್ನು ಪೂಜಾರಿ ಅಣ್ಣಾಮಲೈ ನೆರವೇರಿಸಿದರು.


ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ತೋಟದ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲಿನಿಂದ ಆಗಮಿಸಿದ ಭಕ್ತರು ದೈವದ ಕೃಪೆಗೆ ಪಾತ್ರರಾದರು. ತೋಟದ ವ್ಯವಸ್ಥಾಪಕ ನಂಜಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net