ಅಜ್ಜಯ್ಯ ಸಿದ್ಧಾರೂಢಸ್ವಾಮಿ ಮಠದಲ್ಲಿ ವಿಶೇಷ ಪೂಜೆ

14-kkr1(1-24
ಕಿಕ್ಕೇರಿಯ ಸಿದ್ದಾರೂಢಸ್ವಾಮಿ ಮಠದಲ್ಲಿ ಭಾನುವಾರ ಕುರುಹಿನಶೆಟ್ಟಿ ಸಮಾಜದವರು ವಿಶೇಷ ಪೂಜೆ ಸಲ್ಲಿಸಿದರು. ಸೋಮಶೇಖರ್, ಸೂರ್ಯನಾರಾಯಣ, ಡಿ. ಉಮೇಶ್, ಸುನೀತಾ ದಯಾನಂದ್ ಮತ್ತಿತರರಿದ್ದರು.
Published on

ಕಿಕ್ಕೇರಿ: ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಎಂದು ಪಟ್ಟಣದ ಅಜ್ಜಯ್ಯ ಸಿದ್ಧಾರೂಢಸ್ವಾಮಿ ಮಠದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಠದ ಭಕ್ತರು, ಕುರುಹಿನಶೆಟ್ಟಿ ಸಮಾಜದವರು ಸಿದ್ಧಾರೂಢ ಸ್ವಾಮಿಗೆ ಪೂಜೆ ಸಲ್ಲಿಸಿ ಭಜನೆ ಮಾಡಿದರು. ಪಟ್ಟಾಭಿರಾಮ ದೇವರ ಭಾವಚಿತ್ರಕ್ಕೆ ಪೂಜಿಸಿ ನಮಿಸಿದರು. ಬಳಿಕ ಭಕ್ತರಿಗೆ ಪ್ರಸಾದ ನೀಡಲಾಯಿತು.

ಮುಖಂಡರಾದ ಸೋಮಶೇಖರ್, ಸೂರ್ಯನಾರಾಯಣ, ಡಿ.ಉಮೇಶ್, ಮಾದೇಗೌಡ, ಸುನೀತಾ ದಯಾನಂದ್ ಮತ್ತಿತರರಿದ್ದರು.

14ಕೆಕೆಆರ್1: ಕಿಕ್ಕೇರಿಯ ಸಿದ್ದಾರೂಢಸ್ವಾಮಿ ಮಠದಲ್ಲಿ ಭಾನುವಾರ ಕುರುಹಿನಶೆಟ್ಟಿ ಸಮಾಜದವರು ವಿಶೇಷ ಪೂಜೆ ಸಲ್ಲಿಸಿದರು. ಸೋಮಶೇಖರ್, ಸೂರ್ಯನಾರಾಯಣ, ಡಿ. ಉಮೇಶ್, ಸುನೀತಾ ದಯಾನಂದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net