

ಬೆಂಗಳೂರು : ಇಂದು ಗುರುಪೂರ್ಣಿಮೆಯ ಪ್ರಯುಕ್ತ ನಗರದ ಹಲವು ದೇವಾಲಯಗಳಲ್ಲಿ ಭಕ್ತರ ದಂಡು ಕಂಡುಬರುತ್ತಿದೆ. ವಿಶೇಷವಾಗಿ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನಗಳಲ್ಲಿ ಭಕ್ತರು ನೆರೆದಿದ್ದಾರೆ. ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳು ನಡೆದಿವೆ.
ಮಲ್ಲೇಶ್ವರಂ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಿದ್ದು, ದರ್ಶನಕ್ಕೆ ಉತ್ತಮ ವ್ಯವಸ್ಥೆ ಕಂಡುಬಂತು. ಜೆ.ಪಿ.ನಗರದ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ, ಸಾಯಿ ಬಾಬಾ ಸನ್ನಿಧಿಯಲ್ಲಿ, ಕೋವಿಡ್ ಚಿಕಿತ್ಸೆಯ ಔಷಧಿಗಳೊಂದಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಮತ್ತೆ ಹಲವಾರು ಭಕ್ತರು ಮನೆಯಲ್ಲೇ ಶ್ರೀ ದತ್ತಾತ್ರೇಯ ದೇವರ ಗುರುಚರಿತ್ರೆ ಪಠಣ ಮತ್ತು ಶ್ರೀ ಸಾಯಿ ಸಚ್ಚರಿತೆ ಪಠಣಗಳ ಮೂಲಕ ಗುರುಗಳ ಆರಾಧನೆ ಮಾಡುತ್ತಿದ್ದಾರೆ.