ವಿಜಯವಾಣಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಯಿಂದ ಸ್ವಚ್ಛತಾ ಅಭಿಯಾನ ವಿಶೇಷ ಕಾರ್ಯಕ್ರಮ

raichur
raichur
Published on

ರಾಯಚೂರು ನಗರವು ಪ್ಲಾಸ್ಟಿಕ್ ಮುಕ್ತವಾಗಿರಲು ಪ್ರತಿಯೊಬ್ಬರು ಬಟ್ಟೆ ಚೀಲದೊಂದಿಗೆ ಅಗತ್ಯ ವಸ್ತುಗಳನ್ನು ತರುವ ಪ್ರತಿಜ್ಞೆ ಮಾಡಬೇಕು ಎಂದು ಗೌರಿಗದ್ದೆ ಆಶ್ರಮದ ಶ್ರೀ ವಿನಯ ಗುರೂಜಿ ಹೇಳಿದರು.

ನಗರದ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ವಿಜಯವಾಣಿ ಪತ್ರಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಭಾರತ ಸೇವಾದಳ, ಸಹಕಾರ ಇಲಾಖೆ ವತಿಯಿಂದ ಗುರುವಾರ ಸ್ವಚ್ಛತಾ ಅಭಿಯಾನ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಜಾಗೃತಿ ಕಾರ್ಯಕ್ರಮ ವೇದಿಕೆಗೆ ಮಾತ್ರ ಸೀಮಿತವಾಗಿರದೆ ವಾಸ್ತವಿಕವಾಗಿರಬೇಕು.

ರಾಯಚೂರು ನಗರಸಭೆ ಮಹಾಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದು ಸಂತೋಷವಾಗಿದೆ. ನಗರವು ಪ್ಲಾಸ್ಟಿಕ್ ಮುಕ್ತವಾಗಿರಲು ಪ್ರತಿಯೊಬ್ಬರು ಬಟ್ಟೆ ಚೀಲದೊಂದಿಗೆ ಅಗತ್ಯ ವಸ್ತುಗಳನ್ನು ತರುವ ಪ್ರತಿಜ್ಞೆ ಮಾಡಬೇಕು. ಜಿಲ್ಲೆಯ ಕೋಟೆ ಸ್ವಚ್ಛತೆ ಮಾಡಲಾಗುತ್ತಿದೆ. ರಾಜಕಾರಣಿಗಳು ಸ್ವಚ್ಚತೆಗೆ ಮುಂದಾಗಲು ಯುವಕರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ಎಲ್ಲರೂ ಮನಸು ಮಾಡಿದರೆ ದೇಶವನ್ನೆ ಸ್ವಚ್ಚ ಮಾಡಲು ಸಾಧ್ಯವಾಗಲಿದೆ. ಮೇರಾ ಭಾರತ ಮಹಾನ್ ಎಂದು ಹೇಳುವರು. ಆದರೆ ಅವರ ಮನೆ ಮುಂದೆ 4 ಕೆಜಿ ಪ್ಲಾಸ್ಟಿಕ್ ತುಂಬಿರುತ್ತದೆಂದು ಟೀಕಿಸಿದರು.

 
ನಾನು ಕಳೆದ 3 ವರ್ಷ ಪ್ರತಿ ದಿನ ಒಂದು ಊರು ಸ್ವಚ್ಛತೆ ಮಾಡಿರುವೆ. ವಿಜಯವಾಣಿ ಅವರು ಸಹ ಅಪಾರ ಪರಿಸರ ಕಾಳಜಿ ಹೊಂದಿದ್ದಾರೆ. ಂದು ಚಿತ್ರ ಕಲೆ ಸ್ಪರ್ಧೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದೆ. ವಿಯವಾಣಿ ಪತ್ರಿಕೆಯ ಮಾಲೀಕರು ಓಡುವ ಕುದುರೆ ಇದ್ದಂತೆ. ಅವರು ಖಾಲಿ ಇರುವವರನ್ನು ಹತ್ತಿರಕ್ಕೆ ಕರೆದುಕೊಳ್ಳುವುದಿಲ್ಲ. ದುಡಿಯುವವರು, ಸಮಾಜ ಸೇಗಳನ್ನು ಮಾಡುವವೆರಿಗೆ ಅಪಾರ ಗೌರವ ನೀಡುತ್ತಾರೆ. ಮುಂದಿನ ದಿನದಲ್ಲಿ ವಿಜಯವಾಣಿ ಪತ್ರಿಕೆಯಿಂದ ಮಾಡುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಸಹಕಾರ ಸಂಘಗಳ ಉಪನಿಬಂಧಕ ಎಂ.ಆರ್. ಮನೋಹರ ಮಾತನಾಡಿ, ನಮ್ಮ ಪರಿಸರ ಸ್ವಚ್ಚವಾಗಿರಿಸುವುದು ನಮ್ಮೆಲ್ಲರ ಹೊಣೆ. ಏಕ್ ಪೇಡ್ ಮಾ ಕೆ ನಾಮ್ ಹೆಸರಿನಲ್ಲಿ ಪ್ರತಿಯೊಬ್ಬರು ಮನೆಗೊಂದು ಮರ ಊರಿಗೊಂದು ವನ ನಿರ್ಮಿಸುವ ಮೂಲಕ ಈ ಅಭಿಯಾನವನ್ನು ಅರ್ಥಪೂರ್ಣವಾಗಿಸೋಣ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಸ್.ವಿಜಯಕುಮಾರ ಪಾಟೀಲ ಶಾವಂತಗೇರಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯವು ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುತ್ತಿದೆ. ಮೆಟ್ರೋ ನಗರಗಳಲ್ಲಿ ಕಸತ್ಯಾಜ್ಯ ವಿಲೇವಾರಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ತಿಳಿಸಿ, ರಾಜ್ಯ ಸಹಕಾರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಜರುಗುವ ತರಬೇತಿ ಕಾರ್ಯಕ್ರಮಗಳ ಕುರಿತು ತಿಳಿಸಿದರು .

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಯಂಕಣ್ಣ, ಪಾಲಿಕೆ ಸದಸ್ಯ ಶರಣಬಸವ,ವಿರುಪಾಕ್ಷಪ್ಪ ಕ್ಯಾದಿಗ್ಗೇರಿ, ಎಸ್.ಜಿ. ಕಲ್ಲಯ್ಯಸ್ವಾಮಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಶೇಖ್ ಹುಸೇನ್, ಸಹಕಾರ ಅಭಿವೃದ್ಧಿ ಅಧಿಕಾರಿ ಸಿದ್ಧಣ್ಣ, ಶಿವಶಂಕರ ವಕೀಲ, ಡಾ.ಎಂ. ರವಿ,ವಿದ್ಯಾಸಾಗರ ಚಿಣಮಗೇರಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net