ವಿಶೇಷ ಕಾರ್ಯಕ್ರಮ 11ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸರೋದ ವಾದಕ ಪಂ. ರಾಜೀವ ತಾರಾನಾಥ ನೆನಪಿನಲ್ಲಿ ಪಂ. ರಾಜೀವ್​ ತಾರಾನಾಥ್​ ಮೆಮೋರಿಯಲ್​ ಟ್ರಸ್ಟ್​, ಜಿ.ಬಿ.ಜೋಶಿ ಮೆಮೋರಿಯಲ್​ ಟ್ರಸ್ಟ್​ ಸಹಯೋಗದಲ್ಲಿ ಏ. 11ರಂದು ನಗರದ ಸೃಜನಾ ರಂಗ ಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಸಂಜೆ 5.30ಕ್ಕೆ ಪಂ. ರಾಜೀವ ತಾರಾನಾಥರ ಬಗ್ಗೆ "ನಗುವನ' ಕ್ರಿಯೇಶನ್ಸ್​ ಅಡಿ ಎಚ್​.ಆರ್​. ಸುಜಾತ ಹಾಗೂ ಎನ್​ಆರ್​ ವಿಶುಕುಮಾರ್​ ನಿರ್ಮಿಸಿದ ಸಾಕ್ಷಿ ಚಿತ್ರ ಪ್ರದರ್ಶನ ನಡೆಯಲಿದೆ. ನಂತರ ತಾರಾನಾಥರ ಬಗ್ಗೆ ವಿವಿಧ ಲೇಖಕರು ಬರೆದ ಸಂಕಲನವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರ ಬಿಡುಗಡೆ ಮಾಡುವರು. ಪುಸ್ತಕ ಕುರಿತು ಹಿರಿಯ ವಿಮರ್ಶಕ ಡಾ. ಬಸವರಾಜ್​ ಕಲ್ಗುಡಿ ಮಾತನಾಡಲಿದ್ದಾರೆ. ಪಂ. ರಾಜೀವ್​ ತಾರಾನಾಥರ ಸ್ನೇಹ ವ್ಯಕ್ತಿತ್ವದ ಕುರಿತು ಡಾ. ರಮಕಾಂತ್​ ಜೋಶಿ ಹಾಗೂ ಗಾಯಕ ಪಂ. ಎಂ. ವೆಂಕಟೇಶ್​ ಕುಮಾರ ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಅನಂತರ ಪಂ. ಪ್ರವಿಣ ಗೋಡಖಿಂಡಿ ಬಾನಸುರಿ ವಾದನ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net