

ಬನ್ನೂರು: ಪಟ್ಟಣ ಬಸ್ ನಿಲ್ದಾಣದ ಸಮೀಪವಿರುವ ಇತಿಹಾಸ ಪ್ರಸಿದ್ಧ ಶ್ರೀ ಕಾಳಮ್ಮ ದೇವಿಯ 3ನೇ ವರ್ಷದ ಪೂಜಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ದೇವಾಲಯವನ್ನು ವಿವಿಧ ಹೂ, ತೋರಣ ಸೇರಿದಂತೆ ವಿದ್ಯುತ್‌ದೀಪದಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 6 ಗಂಟೆಗೆ ಮಂಗಳವಾದ್ಯ ಸಮೇತ ಹೊಳೆಮಜ್ಜನದೊಂದಿಗೆ ದೇವಾಲಯದಲ್ಲಿ ಹೋಮ ನೆರವೇರಿಸಿ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಮಂಗಳವಾರ ಸಂಜೆ 4 ಗಂಟೆಗೆ ದೇವಿಯ ಉತ್ಸವವನ್ನು ರಾಜ ಬೀದಿಯಲ್ಲಿ ನಡೆಸಲಿದ್ದು, ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯುತ್ತದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೊರಕೇರಿ ಮತ್ತು ಗಾಣಿಗೇರಿ ಯಜಮಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.