ಸೈನಿಕರ ಸುರಕ್ಷತೆಗಾಗಿ ದೇವಸ್ಥಾನದಲ್ಲಿ ಪೂಜೆ

IMG_20250508_210756_100.jpg
Published on

ಹುಬ್ಬಳ್ಳಿ: ದೇಶದ ಸೈನಿಕರ ಸುರಕ್ಷತೆ ಹಾಗೂ ಸೈನಿಕರಿಗೆ ಹೆಚ್ಚಿನ ಶಕ್ತಿ ತುಂಬಲು ಇಲ್ಲಿಯ ಉಣಕಲ್ ಸಿದ್ದಪಜ್ಜನ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಸೆಂಟ್ರಲ್ ಕ್ಷೇತ್ರದ ವತಿಯಿಂದ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಭಾರತವು ಅತ್ಯಂತ ಶಕ್ತಿಶಾಲಿ ದೇಶವಾಗಿದೆ. ಉಗ್ರರನ್ನು ಪೋಷಿಸಿದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಸನ್ನದ್ಧವಾಗಿದೆ. ದೇಶದ 140 ಕೋಟಿ ಜನರನ್ನು ಹಿತದೃಷ್ಟಿ ಇಟ್ಟುಕೊಂಡು ಯಾವುದೇ ಜಾತಿ ಮತ ಭೇದ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಗಟ್ಟಿಯಾಗಿ ದೇಶದ ಪರವಾಗಿ ನಿಲ್ಲುವ ಸಂದರ್ಭ ಬಂದಿದೆ ಎಂದರು.

ಕಾಶ್ಮೀರ ಕಣಿವೆಯಲ್ಲಿ ಮೇಲಿಂದ ಮೇಲೆ ಭಯೋತ್ಪಾದಕರ ಮೂಲಕ ದಾಳಿ ನಡೆಸುತ್ತ ಬಂದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ಗೆ ಎಚ್ಚರಿಕೆ ನೀಡಿದಂತೆ ಸೈನಿಕರು ದಿಟ್ಟ ಉತ್ತರ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ, ರೂಪಾ ಶೆಟ್ಟಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರವಿಣ ಪವಾರ, ರಾಮನಗೌಡ ಶೆಟ್ಟನಗೌಡರು, ಮಹೇಂದ್ರ ಕೌತಾಳ, ಸಿದ್ದು ಮೊಗಲಿಶೆಟ್ಟರ, ಸೋಮು ಪಾಟೀಲ, ಅಶೋಕ ವಾಲ್ಮೀಕಿ, ಅಕ್ಕಮ್ಮ ಹೆಗಡೆ, ವರುಷರಾಮ ಹೊಂಬಳ, ರಾಮಣ್ಣ ಕೊಕಾಟಿ, ಮಂಜುನಾಥ ಹೊಸಮನಿ, ಬಸಪ್ಪ ಉಣಕಲ್ಲ, ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net