ನ.19ರಂದು ವಿಶ್ವಕಪ್ ಫೈನಲ್ ಪಂದ್ಯ: ಭಾರತದ ಗೆಲುವಿಗೆ ಪ್ರಾರ್ಥಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

Special Pooje by BJP workers mandya
Published on

ಮಂಡ್ಯ: ಭಾನುವಾರ ಅಹಮದಾಬಾದ್‌ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಭಾರತ ಗೆಲುವಿಗೆ ಪ್ರಾರ್ಥಿಸಿ ಶನಿವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ಶಕ್ತಿದೇವತೆ ಕಾಳಿಕಾಂಭ ದೇವಾಲಯದಲ್ಲಿ ಭಾರತದ ಎಲ್ಲ ಆಟಗಾರರ ಹೆಸರಿನಲ್ಲಿಯೂ ಪೂಜೆ ಸಲ್ಲಿಸಿ ಎಂಟು ದಿಕ್ಕಿಗೂ ಈಡುಗಾಯಿ ಹೊಡೆದರು. ಬಿಜೆಪಿ ನಗರ ಉಪಾಧ್ಯಕ್ಷ ಶಿವಕುಮಾರ ಆರಾಧ್ಯ ಮಾತನಾಡಿ, ಕಾಳಿಕಾಂಭ ದೇವಾಲಯದಲ್ಲಿ ಎಂಟು ದಿಕ್ಕಿಗೂ ಈಡುಗಾಯಿ ಹೊಡೆದು ನಮ್ಮ ಭಾರತ ವಿಶ್ವಕಪ್‌ನಲ್ಲಿ ಜಯಶೀಲರಾಗಲೆಂದು ಪ್ರಾರ್ಥನೆ ಮಾಡಿದ್ದೇವೆ. ಆ ತಾಯಿ ಗೆಲವು ಸಾಧಿಸಲು ನಮ್ಮ ಆಟಗಾರರಿಗೆ ಶಕ್ತಿಕೊಡಲಿ ಎಂದರು.

ಕಾರ್ಯಕರ್ತರಾದ ಹೊಸಹಳ್ಳಿ ಶಿವು, ಮಾದರಾಜೇಅರಸ್, ಪ್ರಸನ್ನ, ಚಂದ್ರು, ನಂದೀಶ್, ಯೋಗೇಶ್, ವಿಜಯ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net