ತುಂಗಭದ್ರಾ ನದಿಗೆ ಬಾಗಿನ ಅರ್ಪಣೆ

tungabhadra
Published on

ಮುಂಡರಗಿ: ತಾಲೂಕಿನ ಹಮ್ಮಿಗಿ ಸಮೀಪದ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಮೈತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಶಾಸಕ ಡಾ.ಚಂದ್ರು ಲಮಾಣಿ ಅವರು ಬುಧವಾರ ಸಂಜೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಮುಖಂಡರಾದ ಲಿಂಗರಾಜಗೌಡ ಪಾಟೀಲ, ಬಸವರಾಜ ಬಿಳಿಮಗ್ಗದ, ರವಿಚಂದ್ರ ಬಂಡಿವಡ್ಡರ, ಶ್ರೀನಿವಾಸ ಅಬ್ಬಿಗೇರಿ, ಮೈಲಾರಪ್ಪ ಕಲಕೇರಿ, ಅಬ್ಬಾಸಾಹೇಬ ಬಹದ್ಧೂರದೇಸಾಯಿ, ಚನ್ನವೀರಪ್ಪ ಯಲಿಗಾರ, ವೀರೇಶ ಎಳಮಲಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net