ಶ್ರೀ ಸುಬ್ರಮಣ್ಯಸ್ವಾಮಿ ಅವತಾರೋತ್ಸವ ಪ್ರಯುಕ್ತ ವಿಶೇಷಪೂಜೆ

23 ckm 6
ಚಿಕ್ಕಮಗಳೂರಿನಲ್ಲಿ ಶ್ರೀ ಸುಬ್ರಮಣ್ಯಸ್ವಾಮಿ ಅವತಾರೋತ್ಸವ ಪ್ರಯುಕ್ತ ತಮಿಳು ಜನಾಂಗದ ನೂರಾರು ಮಹಿಳೆಯರು ಗುರುವಾರ ಮುಂಜಾನೆ ನಗರದ ಬೋಳರಾಮೇಶ್ವರ ದೇವಾಲಯದಿಂದ ಕಳಸವನ್ನು ಹೊತ್ತು ಕುಮಾರಗಿರಿ ಶ್ರೀಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ತೆರಳಿದರು.
Published on

ಚಿಕ್ಕಮಗಳೂರು: ಶ್ರೀ ಸುಬ್ರಮಣ್ಯಸ್ವಾಮಿ ಅವತಾರೋತ್ಸವ ಪ್ರಯುಕ್ತ ತಮಿಳು ಜನಾಂಗದ ನೂರಾರು ಮಹಿಳೆಯರು ಗುರುವಾರ ಮುಂಜಾನೆ ನಗರದ ಬೋಳರಾಮೇಶ್ವರ ದೇವಾಲಯದಿಂದ ಕಳಸವನ್ನು ಹೊತ್ತು ಕುಮರಿಗಿರಿ ಶ್ರೀಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ತೆರಳಿದರು.

ಬೆಳಗ್ಗೆ ೭ ಗಂಟೆಗೆ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ನೆರೆದಿದ್ದ ಮಹಿಳೆಯರು ಹಾಗೂ ಸಮಾಜ ಮುಖಂಡರುಗಳು ಅವತಾರೋತ್ಸವ ವಿಶೇಷ ಪೂಜೆ ನೆರವೇರಿಸಿ ಶ್ರೀವಳ್ಳಿ, ಶ್ರೀದೇವಸೇನಾ, ಶ್ರೀ ಸುಬ್ರಮಣ್ಯಸ್ವಾಮಿ ಉತ್ಸವಮೂರ್ತಿಗಳೊಂದಿಗೆ ಕ್ಷೀರ ತುಂಬಿದ ಕಳಸವನ್ನುಹೊತ್ತು ಮೆರವಣಿಗೆ ಮೂಲಕ ಸಾಗಿದರು.
ವಿಶೇಷಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ವೈಯಕ್ತಿಕ ಬದುಕಿನಲ್ಲಿ ಹಲವಾರು ದೇಶಗಳನ್ನು ಪ್ರವಾಸ ಕೈಗೊಂಡಿz್ದೆÃನೆ. ಆದರೆ ಭಾರತೀಯ ಸಂಸ್ಕೃತಿಯ ಪೂಜಾ ವಿಧಿ ವಿಧಾನಗಳು ಹಾಗೂ ಧಾರ್ಮಿಕ ಪರಂಪರೆ ಯಾವ ದೇಶದಲ್ಲಿಯೂ ಕಂಡಿಲ್ಲ ಎಂದು ಹೇಳಿದರು.
ಬಳಿಕ ಮಹಿಳೆಯರು ಕಳಸವನ್ನು ಹೊತ್ತು ಐ.ಜಿ.ರಸ್ತೆ ಮುಖಾಂತರ ಬಸವನಹಳ್ಳಿ ಶಾಲೆ ಸಮೀಪ ತಲುಪಿ ಅಲ್ಲಿಂದ ಬಸ್ ಮೂಲಕ ಶ್ರೀಕುಮಾರಗಿರಿ ಶ್ರೀಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ತಲುಪಿದರು. ತದನಂತರ ವಿಶೇಷ ಪೂಜೆ ಹಾಗೂ ಹಾಲಿನ ಅಭಿಷೇಕ ಶ್ರೀ ಸ್ವಾಮಿಗೆ ನೆರವೇರಿತು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಬಳಿಕ ಅನ್ನಸಂಪರ್ತಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ತಮಿಳು ಸಂಘದ ಅಧ್ಯಕ್ಷ ಜಿ.ರಘು, ಕಾರ್ಯದರ್ಶಿ ಅಣ್ಣಾವೇಲು, ಶ್ರೀ ಸುಬ್ರಮಣ್ಯ ದೇವಾಲಯ ಸಮಿತಿ ಅಧ್ಯಕ್ಷ ಗುಣಶೇಖರ್, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ತಿಳುವಳ್ಳರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಶಂಕರ್, ಖಜಾಂಚಿ ಕೃಷ್ಣರಾಜು, ಮುಖಂಡರಾದ ವೆಂಕಟೇಶ್, ಕಾರ್ತಿಕ್, ಸಿ.ಕೆ.ಮೂರ್ತಿ, ಮಂಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net