ರಾಮ ನವಮಿ ನಿಮಿತ್ತ ವಿಶೇಷ ಪೂಜೆ

17-04-Shiva-1
ಶ್ರೀರಾಮ ನವಮಿ ನಿಮಿತ್ತ ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ರಾಮ ಮಂದಿರದಲ್ಲಿ ರಾಮ, ಸೀತೆ, ಲಕ್ಷ್ಮಣ ಮೂರ್ತಿಗಳಿಗೆ ಬುಧವಾರ ವಿಶೇಷ ಅಲಂಕಾರ ಮಾಡಲಾಯಿತು.
Published on

ರಾಯಚೂರು: ಶ್ರೀರಾಮ ನವಮಿ ನಿಮಿತ್ತ ಜಿಲ್ಲೆಯ ವಿವಿಧ ದೇವಸ್ಥಾನದಲ್ಲಿ ಬುಧವಾರ ದೇವರಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ಹೋಮ ಹವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮ ಮಂದಿರ, ಕೋದಂಡರಾಮ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ, ಪೂಜೆ ಹಾಗೂ ರಥೋತ್ಸವ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net