

ಬಳ್ಳಾರಿ: ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಕರೊನಾ ಸೋಂಕಿನ ಅಲೆಯ ಅಬ್ಬರದ ನಿಯಂತ್ರಣದ ಸಲುವಾಗಿಯೇ ಮೌಢ್ಯಾಚರಣೆಯತ್ತ ಗ್ರಾಮಸ್ಥರು ಮೊರೆ ಹೋಗಿದ್ದಾರೆ.
ಕೊಳಗಲ್ಲು ಗ್ರಾಮದಲ್ಲಿ ಈವರೆಗೂ 300ಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆ ಯಾಗಿವೆ.
ಈವರೆಗೆ ಅಂದಾಜು 30 ಮಂದಿ ಈ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ, ಕರೊನಾ ಸೋಂಕಿನ ಅಲೆಯ ಅಬ್ಬರಕ್ಕೆ ಹೇಗಾದರೂ ಮಾಡಿ ಕಡಿವಾಣ ಹಾಕಬೇಕೆಂಬ ನಿರ್ಧಾರಕ್ಕೆ ಬಂದು ಮೂಢನಂಬಿಕೆ ಮೊರೆ ಹೋಗಿದ್ದದರು.
ಬೆಳಗಿನ ಜಾವ ಹತ್ತಾರು ಮಂದಿ ಗ್ರಾಮಸ್ಥರು ಮಡೆಸ್ನಾನ ಮಾಡಿ ಅಂದಾಜು 5 ಕ್ವಿಂಟಾಲ್ ಅನ್ನ, ಒಂದು ಕ್ವಿಂಟಾಲ್ ಜೋಳದ ಅನ್ನ, ಎರಡು ಕ್ವಿಂಟಾಲ್ ಮೊಸರನ್ನು ತಯಾರಿಸಿಕೊಂಡು ಗ್ರಾಮದ ಹೊಲದ ಮೇರೆಯ ಸುತ್ತಲೂ ಕೊಡಲಿ- ಬಡಿಗೆ, ಕಟ್ಟಿಗೆ ಡೊಳ್ಳಿನ ವಾದ್ಯದೊಂದಿಗೆ ತೆರಳಿ, ಹೊಲದ ಮೇರೆಯ ಮೇಲೆ ಓಡುತ್ತಾ, ಮಡೆಸ್ನಾನದಿಂದ ತಯಾರಿಸಿ ತಂದಿದ್ದ ಪರಮಾನ್ನವನ್ನ ಚೆಲ್ಲುತ್ತಾ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಭೂಮಿ ತಾಯಿಗೆ ಭಕ್ತರು ಬೇಡಿಕೊಂಡಿರೋದು ಗ್ರಾಮದ ಪ್ರಮುಖ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾಗಿದೆ.