

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ 155ನೇ ಯಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ತೇರಿನ ಗಡ್ಡಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಯಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಸಕಲ ಸದ್ಭಕ್ತರು ಪಾಲ್ಗೊಂಡು ಜಗದ್ಗುರು ಅನ್ನದಾನೀಶ್ವರರ ಕೃಪೆಗೆ ಪಾತ್ರರಾಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಆಶೀರ್ವಚನ ನೀಡಿದರು.
ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಜಿ. ಹಿರೇಮಠ, ಉಪಾಧ್ಯಕ್ಷರಾದ ದೇವು ಹಡಪದ, ಮುದಿಯಪ್ಪ ಕುಂಬಾರ, ಕಾರ್ಯದರ್ಶಿ ಶಿವು ನಾಡಗೌಡರ, ಸಹ ಕಾರ್ಯದರ್ಶಿ ಶಿವು ಉಪ್ಪಾರ, ಖಜಾಂಚಿ ನಾಗರಾಜ ಮುರಡಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಡಾ. ಬಿ.ಜಿ. ಜವಳಿ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ಡಾ. ಡಿ.ಸಿ. ಮಠ, ಮಂಜುನಾಥ ಇಟಗಿ, ಎನ್.ಎಫ್. ಅಕ್ಕೂರ, ಚನ್ನವೀರಯ್ಯ ಹಿರೇಮಠ, ದೇವಪ್ಪ ಇಟಗಿ, ಶರಣಪ್ಪ ಬೆಲ್ಲದ, ಪ್ರಶಾಂತಗೌಡ ಗುಡದಪ್ಪನವರ, ಗುಡದೀರಪ್ಪ ಲಿಂಬಿಕಾಯಿ, ಮಂಜುನಾಥ ಮುಧೋಳ, ಶಾಂತಪ್ಪ ಕಡ್ಡಿ, ಮಹಾಂತೇಶ ಕೊರಡಕೇರಿ, ವೀರೇಶ ಗೋಡಿ, ಹಾಲಯ್ಯ ಹಿರೇಮಠ, ಶಿವು ವಾಲಿಕಾರ, ಅನ್ನದಾನೀಶ್ವರ ಅಕ್ಕನ ಬಳಗದವರು ಇತರರು ಇದ್ದರು.