

ತೀರ್ಥಹಳ್ಳಿ: ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೀಘ್ರ ಗುಣಮುಖರಾಗಲೆಂದು ತಾಲೂಕು ಜೆಡಿಎಸ್ ಕಾರ್ಯಕರ್ತರು ಶನಿವಾರ ಪಟ್ಟಣದ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜೆಡಿಎಸ್ ತಾಲೂಕು ಕಾರ್ಯದರ್ಶಿ, ಕುಡುವತ್ತಿ ಗುರುದತ್, ಯುವ ಜನತಾದಳದ ಅಧ್ಯಕ್ಷ ತಲುಬಿ ರಾಘವೇಂದ್ರ, ಮಹಿಳಾ ಘಟಕದ ಚಂದ್ರಕಲಾ, ಸುವರ್ಣಾ, ಪ್ರೇಮಾ ಚಂದ್ರ, ಬಂದ್ಯಾ ಮಹೇಶ್ ಇದ್ದರು.