ವಾಗಟ ಅಗ್ರಹಾರದಲ್ಲಿ ವಿಶೇಷ ಪೂಜೆ

vagata
Published on

ಜಡಿಗೇನಹಳ್ಳಿ: ಹೋಬಳಿಯಲ್ಲಿನ ವಾಗಟ ಅಗ್ರಹಾರದಲ್ಲಿನ ಪುರಾಣ ಪ್ರಸಿದ್ಧ ಶ್ರೀದೇವಿ ಭೂದೇವಿ ಸಮೇತ ಶ್ರೀ ವರದರಾಜ ಪೆರುಮಾಳ್ ಸ್ವಾಮಿ ದೇವಸ್ಥಾನಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.ಮುಂಜಾನೆ ಸ್ವಾಮಿಗೆ ಸುಪ್ರಭಾತ ಸೇವೆಯೊಂದಿಗೆ ಅಭಿಷೇಕಾದಿ ಪೂಜಾ ವಿಧಿ ವಿಧಾನಗಳು ನಡೆದವು.

ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ವೇದಪಾರಾಯಣ ಮತ್ತು ವಾಗಟ ಅಗ್ರಹಾರ ಪಾರಾಯಣ ಗೋಷ್ಠಿಯಿಂದ ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆ ಪಾರಾಯಣ ನಡೆಯಿತು. ವೈಕುಂಠ ದ್ವಾರದ ಮೂಲಕ ಹಾಯ್ದು ಬಂದ ಭಕ್ತರು ಸ್ವಾಮಿಯ ದರ್ಶನ ಪಡೆದು ತೀರ್ಥ ಪ್ರಸಾದಗಳನ್ನು ಸ್ವೀಕರಿಸಿದರು. ಮಧ್ಯಾಹ್ನ ಭಕ್ತಿ ಭಜನೆ ಏರ್ಪಡಿಸಲಾಗಿತ್ತು. ಮುಂಜಾನೆಯಿಂದ ಸಂಜೆಯ ಮಹಾಮಂಗಳಾರತಿವರೆಗೂ ಅರ್ಚಕ ಶ್ರೀನಿವಾಸ್ ಭಟ್ಟಾಚಾರ್ಯರು ಮತ್ತು ವಸುದೇವ ಭಟ್ಟಾಚಾರ್ಯರು ಪೂಜಾ ಕೈಂಕರ್ಯ ನಡೆಸಿಕೊಟ್ಟರು ವರದರ ವರದರಾಜ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಎಂ.ಸಿ ನರೇಂದ್ರ, ಕಾರ್ಯದರ್ಶಿ ಹರಿಪ್ರಸಾದ್, ಖಜಾಂಚಿ, ನಾರಾಯಣ ಮೂರ್ತಿ, ಸಾಗರ್, ಕಾರ್ತಿಕ್ ಪ್ರತಾಪ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net