ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಮತಗಟ್ಟೆಗಳು

Special Polling Stations in Mysore
Published on

ಮೈಸೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿ ತೆರೆಯಲಾಗಿದ್ದ ವಿಶೇಷ ಮತಗಟ್ಟೆಗಳು ಮತದಾರರ ಗಮನ ಸೆಳೆಯಿತು.

ಮಹಿಳಾ ಮತದಾರರು ಹೆಚ್ಚು ಇರುವ ಕಡೆಗಳಲ್ಲಿ ಸಖಿ ಮತಗಟ್ಟೆ, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಯುವ ಮತಗಟ್ಟೆ ತೆರೆಯಲಾಗಿತ್ತು. ಅದೇ ರೀತಿ ವಿಷಯದಾರಿತ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2915 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಪೈಕಿ 11 ಕಡೆಗಳಲ್ಲಿ ಅಂಗವಿಕಲರ ಮತಗಟ್ಟೆ, 11 ಯುವ ಮತಗಟ್ಟೆ, 12 ಸಾಂಪ್ರಾದಾಯಿಕ ಮತಗಟ್ಟೆ ಮತ್ತು 10 ಮಾದರಿ ಮತಗಟ್ಟೆ, 55 ಸಖಿ ಮತಗಟ್ಟೆಯನ್ನು ತೆರೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net