

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಫೆ. 27ರದು ಬೆಳಗ್ಗೆ 10.30ಕ್ಕೆ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಿದಿರು ನಾನಾರಿಗಲ್ಲದವಳು ಜಾನಪದ: ಹೊಸ ತಲೆಮಾರಿನ ಸ್ಪಂದನ ವಿಶೇಷ ಉಪನ್ಯಾಸ ಮತ್ತು ಕಲಾ ಪ್ರದರ್ಶನ ಏರ್ಪಡಿಸಿದೆ.
ಗುಲ್ಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಕಾರ್ಯಕ್ರಮ ಉದ್ಘಾಟಿಸುವರು. ಪ್ರೊ. ವಿ.ಎಲ್. ಪಾಟೀಲ ಅವರು ಜಾನಪದ : ಹೊಸ ತಲೆಮಾರಿನ ಸ್ಪಂದನ ಉಪನ್ಯಾಸ ನೀಡುವರು. ಅತಿಥಿಗಳಾಗಿ ಕೆ.ಎಚ್. ಚನ್ನೂರ, ಕುಮಾರ ಬೆಕ್ಕೇರಿ, ಎನ್.ನಮ್ರತ, ಡಾ. ಶ್ರೀಶೈಲ ನಾಗರಾಳ ಆಗಮಿಸುವರು. ವಿಶ್ವೇಶ್ವರಿ ಹಿರೇಮಠ ಉಪಸ್ಥಿತರಿರುವರು. ಗೊಲ್ಲಹಳ್ಳಿ ಶಿವಪ್ರಸಾದ ಅಧ್ಯಕ್ಷತೆ ವಹಿಸುವರು. ನಂತರ ವಿವಿಧ ಕಲಾ ತಂಡಗಳಿಂದ ಜಾನಪದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.