

ವಿಜಯವಾಣಿ ಸುದ್ದಿಜಾಲ ಧಾರವಾಡ
ಸತ್ತೂರಿನ ನಾರಾಯಣ ಪಾರಾಯಣ ಬಳಗದ ವತಿಯಿಂದ ಆ. 18ರಂದು ಬೆಳಗ್ಗೆ 8.15ಕ್ಕೆ ಪ್ರಮೋದ ಸಿರುಗುಪ್ಪಿ ನಿವಾಸದಲ್ಲಿ "ಚಾತುರ್ಮಾಸ್ಯ ಆಚರಣೆ ಕುರಿತು" ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಶ್ರೀ ಕಲ್ಲೂರು ಮಧ್ವಮಠದ ಶ್ರೀ ವಿಶ್ವಾಧಿಪತಿಪ್ರಿಯತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ನಿಮಿತ್ತ ಆ. 21ರಂದು ಬೆಳಗ್ಗೆ 8.15ಕ್ಕೆ ಡಾ. ಮುರಾರಿ ಆಚಾರ್ಯ ಗಿರಿಭಟ್ಟನವರ ಅವರು ರಾಘವೇಂದ್ರ ತೀರ್ಥರ ಜೀವನ ಚರಿತ್ರೆ, ಕೃತಿಗಳು ಹಾಗೂ ಪವಾಡಗಳು ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 6.30ಕ್ಕೆ ಪಾಂಡುರಂಗ ಕುಲಕರ್ಣಿ ಅವರು ದಾಸವಾಣಿ ಪ್ರಸ್ತುತಪಡಿಸಲಿದ್ದಾರೆ. ಇದಕ್ಕೂ ಪೂರ್ವ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಸ್ತೋತ್ರಗಳ ಪಾರಾಯಣ ನಡೆಯುತ್ತವೆ ಎಂದು ಬಳಗದ ಕಾರ್ಯದರ್ಶಿ ರಘೋತ್ತಮ ಅವಧಾನಿ ತಿಳಿಸಿದ್ದಾರೆ.