ವಿಶೇಷ ಉಪನ್ಯಾಸ ಇಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪವು ಜು. 11ರಂದು ಸಂಜೆ 6 ಗಂಟೆಗೆ ರಾ. ಹ. ದೇಶಪಾಂಡೆ ಭವನದಲ್ಲಿ ತಂತ್ರಜ್ಞಾನದ ಡಿಜಿಟಲ್​ ಅರೆಸ್ಟ್​, ಎಚ್ಚರಿಕೆ ಹಾಗೂ ಕಾನೂನು ಜಾಗೃತಿ ವಿಶೇಷ ಉಪನ್ಯಾಸ ಏರ್ಪಡಿಸಿದೆ.
ಅತಿಥಿಯಾಗಿ ಬೆಂಗಳೂರು ಕಾನೂನು ಸೇವಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್​ ಸದಸ್ಯ ಆನಂದಕುಮಾರ ಮಗದುಮ್ಮ ಆಗಮಿಸುವರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್​.ಎಚ್​. ಮಿಟ್ಟಲಕೋಡ ಉಪನ್ಯಾಸಕರಾಗಿ ಆಗಮಿಸುವರು. ನಿವೃತ್ತ ಸಹಾಯಕ ಪೊಲೀಸ್​ ಆಯುಕ್ತ ಬಿ.ಡಿ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net