ವಿಶೇಷ ಉಪನ್ಯಾಸ ಕಾರ್ಯಕ್ರಮ

01BTP01
ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಭರತ್‌ರಾಜ್ ಅರಸು, ಬಿ.ಟಿ.ನವೀನ್ ಕುಮಾರ್, ಡಾ.ಮಂಜು ಎಸ್.ಕೆ, ರಘುವೀರ್, ಶಾಂಭವಿ, ಪದ್ಮಾವತಿ ಇದ್ದರು.
Published on

ಬೆಟ್ಟದಪುರ: ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಮಂಗಳವಾರ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.

ಹನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಬಿ.ಟಿ.ನವೀನ್ ಕುಮಾರ್ ಮಾತನಾಡಿ, ಭಾರತ ಸ್ವಾತಂತ್ರೃ ನಂತರದ ಎಲ್‌ಜಿಬಿಟಿಕ್ಯೂ+ ಚಳವಳಿ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಜತೆಗೆ ಎಲ್‌ಜಿಬಿ ವರ್ಗಗಳ ಪ್ರಸ್ತುತ ಅವರ ಸ್ಥಾನಮಾನ ಮತ್ತು ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಚೌಕಟ್ಟಿನೊಳಗೆ ಅವರ ಹಕ್ಕೊತ್ತಾಯಗಳು ಹಾಗೂ ಚಳವಳಿಯ ವಿಶಿಷ್ಟ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳೊಡನೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಭರತ್‌ರಾಜ್ ಅರಸು, ಅಧ್ಯಾಪಕರಾದ ಡಾ.ಮಂಜು ಎಸ್.ಕೆ, ರಘುವೀರ್, ಐಕ್ಯೂಎಸಿ ಸಹ ಸಂಚಾಲಕಿ ಪ್ರೊ.ಶಾಂಭವಿ, ಪ್ರೊ.ಪದ್ಮಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net