ಕೌಶಲ ವೃದ್ಧಿಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ, ವಿಟಿಯು ರಿಜಿಸ್ಟ್ರಾರ್ ಡಾ.ಬಿ.ಇ.ರಂಗಸ್ವಾಮಿ ಆಶಯ

sjec
ಬಿಲ್ಡಿಂಗ್ ಆತ್ಮನಿರ್ಭರ್ ಭಾರತ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಬಿ.ಇ.ರಂಗಸ್ವಾಮಿ , ಎಸ್‌ಜೆಇಸಿಯ ನಿರ್ದೇಶಕ ಫಾ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಪ್ರಾಂಶುಪಾಲ ಡಾ.ರಿಯೋ ಡಿಸೋಜ, ಸಹಾಯಕ ನಿರ್ದೇಶಕ ಫಾ.ಕೆನೆತ್ ಆರ್ ಕ್ರಾಸ್ತಾ, ಉಪ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಇದ್ದರು.
Published on

ಮಂಗಳೂರು: ಸೇಂಟ್ ಜೋಸೆಫ್ ಇಂಜಿನಿಯರಿಂಗ್‌ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ ವತಿಯಿಂದ ಸಂಸ್ಥೆಯ ಪ್ರೇರಣಾ ಹಾಲ್‌ನಲ್ಲಿ ಬಿಲ್ಡಿಂಗ್ ಆತ್ಮನಿರ್ಭರ್ ಭಾರತ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಕೌಶಲಾಭಿವೃದ್ಧಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಮತ್ತು ಸಾಮಾಜಿಕ ಆವಿಷ್ಕಾರಗಳನ್ನು ಗುರುತಿಸಬೇಕು ಎಂದರು.

ಎಸ್‌ಜೆಇಸಿಯ ನಿರ್ದೇಶಕ ಫಾ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಪ್ರಾಂಶುಪಾಲ ಡಾ.ರಿಯೋ ಡಿಸೋಜ, ಸಹಾಯಕ ನಿರ್ದೇಶಕ ಕೆನೆತ್ ಆರ್ ಕ್ರಾಸ್ತಾ, ಉಪ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ಮಾನವ ಸಂಪನ್ಮೂಲ ಮ್ಯಾನೇಜರ್ ರಾಕೇಶ್ ಲೋಬೊ ಮತ್ತು ಇಸಿಇ ವಿಭಾಗದ ಮುಖ್ಯಸ್ಥರಾದ ಡಾ.ದಯಾಕ್ಷಿಣಿ ಉಪಸ್ಥಿತರಿದ್ದರು.

ಎಸ್‌ಜೆಇಸಿ - ಎಐಸಿಟಿಇ ಐಡಿಯಾ ಲ್ಯಾಬ್‌ಗೆ ಭೇಟಿ ನೀಡಿದ ಡಾ.ಬಿ.ಇ.ರಂಗಸ್ವಾಮಿ ಅವರು ಸಂಸ್ಥೆಯ ಕೌಶಲ ಅಭಿವೃದ್ಧಿ ಚಟುವಟಿಕೆಗಳನ್ನು ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net