ಸಂಗೀತ, ನೃತ್ಯಗಳಿಗೆ ದೇವದಾಸಿಯರ ಕೊಡುಗೆ ಅಪಾರ

UDP-8-12-Upanyasa
ಮಣಿಪಾಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಿಂದಾ ಪರಾಂಜಪೆ ಉಪನ್ಯಾಸ ನೀಡಿದರು. ಡಾ.ವರದೇಶ್​ ಹಿರೇಗಂಗೆ ಇದ್ದರು.
Published on

ಇತಿಹಾಸಗಾರ್ತಿ ಡಾ. ಬಿಂದಾ ಪರಾಂಜಪೆ ಅಭಿಪ್ರಾಯ | ವಿಶೇಷ ಉಪನ್ಯಾಸ

ವಿಜಯವಾಣಿ ಸುದ್ದಿಜಾಲ ಉಡುಪಿ
ಐತಿಹಾಸಿಕವಾಗಿ ದೇವದಾಸಿಯರು ಮತ್ತು ತವೈಫ್​ಗಳು ಭಾರತದಲ್ಲಿ ಸಂಗೀತ, ನೃತ್ಯ ಮತ್ತು ಕಲೆಗಳ ವಿಕಾಸಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಆದರೆ, ಅವರನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಬನಾರಸ್​ ಹಿಂದು ವಿಶ್ವವಿದ್ಯಾಲಯ (ಬಿಎಚ್​ಯು)ದ ಹಿರಿಯ ಕಲಾ ಇತಿಹಾಸಗಾರ್ತಿ ಡಾ. ಬಿಂದಾ ಪರಾಂಜಪೆ ಅಭಿಪ್ರಾಯಪಟ್ಟರು.

ಮಣಿಪಾಲದ ಗಾಂಧಿಯನ್​ ಸೆಂಟರ್​ ಫಾರ್​ ಫಿಲಾಸಫಿಕಲ್​ ಆರ್ಟ್ಸ್​ ಆ್ಯಂಡ್​ ಸೈನ್ಸಸ್​ (ಜಿಸಿಪಿಎಎಸ್​)ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವದಾಸಿಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶಾಸ್ತ್ರೀಯ ಸ್ಥಾನ-ಮಾನ

ವಾಸ್ತವವಾಗಿ ದೇವದಾಸಿಯರು ಮತ್ತು ತವೈಫ್​ಗಳು ಸಂಗೀತ ಮತ್ತು ನೃತ್ಯವನ್ನು ಉತ್ತಮಗೊಳಿಸಿದ್ದು, ಅದು ಇಂದು ಶಾಸ್ತ್ರೀಯ ಸ್ಥಾನ-ಮಾನ ಗಳಿಸಿದೆ. ಶಿಷ್ಟಾಚಾರ ಕಲಿಯಲು ಮತ್ತು ಕಂಡುಕೊಳ್ಳಲು ಚಿಕ್ಕ ಮಕ್ಕಳನ್ನು ಅವರ ಬಳಿಗೇ ಕಳುಹಿಸುವ ಕಾಲವಿತ್ತು. ಆ ದಿನಗಳಲ್ಲಿ ಅವರು ಗೌರವ ಮತ್ತು ಸ್ವಾಭಿಮಾನ ಅನುಭವಿಸಿದರು. ನಂತರ ಬ್ರಿಟಿಷರು ಅದನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಂಡರು. ನಂತರದ ವರ್ಷಗಳಲ್ಲಿ ಅವರ ವೃತ್ತಿಯನ್ನು ಅಪಮೌಲ್ಯ ಗೊಳಿಸಿರುವುದು ದುರದೃಷ್ಟಕರ ಎಂದರು.

ಸಂಯೋಜಿತ ಸಂಸ್ಕೃತಿಯ ಭಾಗ

ಈ ಸಂಪ್ರದಾಯದ ಅನೇಕ ಪ್ರಮುಖರ ಹೆಸರುಗಳನ್ನು ಉಲ್ಲೇಖಿಸಿ, ಸಂಗೀತ ಮತ್ತು ಕಲೆಗೆ ಅವರ ಕೊಡುಗೆ ಏನೆಂಬುದನ್ನು ವಿವರಿಸಿದರು. ಆದರೆ, ಇಂದಿಗೂ ಸಮಾಜವು ಅವರ ವಿರುದ್ಧ ತಾರತಮ್ಯದ ಭಾವನೆ ಹೊಂದಿರುವುದು ವಿಷಾದದ ಸಂಗತಿ. ದೇವದಾಸಿಯರು ಮತ್ತು ತವೈಫ್​ಗಳು ನಮ್ಮ ಸಂಯೋಜಿತ ಸಂಸ್ಕೃತಿಯ ಭಾಗವೇ ಆಗಿದ್ದಾರೆ ಎಂದು ಹೇಳಿದರು.

ಜಿಸಿಪಿಎಎಸ್​ ಮುಖ್ಯಸ್ಥ ಡಾ.ವರದೇಶ್​ ಹಿರೇಗಂಗೆ ಸಂವಾದ ನಡೆಸಿಕೊಟ್ಟರು. ಡಾ ಭ್ರಮರಿ ಶಿವಪ್ರಕಾಶ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net