ಎಲ್ಲ ಅಳಿದು ಉಳಿಯುವುದು ಮಾತ್ರ ಸತ್ಯ

27BK5
ಬಸವಕಲ್ಯಾಣದ ಗವಿ ಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ೭ನೇ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ರವಿ ನಾವದಗಿಕರ, ಬಸವರಾಜ ಬಿರಾದಾರ, ರಾಕೇಶ ಪುರವಂತ ಇದ್ದರು.
Published on

ಬಸವಕಲ್ಯಾಣ: ಸತ್ಯ ಶಾಶ್ವತ, ಎಲ್ಲಕ್ಕೂ ಸತ್ಯವೇ ಆಧಾರ, ಎಲ್ಲವೂ ಅಳಿದು ಉಳಿಯುವುದು ಸತ್ಯ ಮಾತ್ರ, ಸತ್ಯವೆಂದರೆ ಸಾಕ್ಷಾತ್ ಶಿವನೆ ಎಂದರ್ಥ ಎಂದು ನಗರದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಶ್ರಾವಣ ಮಾಸದ ನಿಮಿತ್ತ ಸಂಸ್ಥಾನ ಗವಿಮಠದಲ್ಲಿ ಸಂಸ್ಥಾನ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕ ಸಹಯೋಗದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವೀರಶೈವ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ೭ನೇ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಜಗದ ಆದಿ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯ ದಶ ಧರ್ಮಸೂತ್ರದಲ್ಲಿ ಸತ್ಯದ ಮಹತ್ವ ಕುರಿತು ಬೋಧಿಸಿತ್ತ ಮನುಷ್ಯ ಸತ್ಯ ತತ್ವವನ್ನು ಪಾಲಿಸದಿದ್ದರೆ ಅವನು ಆಚರಿಸುವ ಎಲ್ಲ ಧರ್ಮಾಚರಣೆಗಳು ವ್ಯರ್ಥವಾಗುತ್ತವೆ ಎಂದು ಸಾರಿದ್ದಾದ್ದಾರೆ. ಇದೇ ರೀತಿ ಜಗಜ್ಯೋತಿ ಬಸವಣ್ಣನವರು ತಮ್ಮ ವಚನದ ಮೂಲಕ ಹುಸಿಯ ನುಡಿಯಬೇಡ ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲರೂ ಸತ್ಯವನ್ನು ಪಾಲಿಸಬೇಕು ಎಂದರು.

ನೇತೃತ್ವ ವಹಿಸಿದ್ದ ಕಲಬುರಗಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿಂದಿನ ಕಾಲದಲ್ಲಿ ದೇವಾಲಯ ಹಾಗೂ ಮಠಗಳ ಬಾಗಿಲು ಕಿರಿದಾಗಿರುತ್ತಿದ್ದವು. ಭಕ್ತ ದೇವರ ದರ್ಶನಕ್ಕೆ ಬರುವಾದ ತಲೆ ಬಾಗಿ ಬರಲಿ ಎನ್ನುವುದೇ ಇದರ ಹಿಂದಿನ ಉದ್ದೇಶ. ಶೃದ್ದೆ, ಭಕ್ತಿಯಿಂದ ನಡೆದಾಗ ಜೀವನನದಲ್ಲಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ ಎಂದರು.

ತಾಲೂಕಾ ಬಜರಂಗದಳ ಸಂಚಾಲಕ ರವಿ ನಾವದಗಿಕರ ಮಾತನಾಡಿದರು. ಬಸವರಾಜ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ರಾಕೇಶ ಪುರವಂತ, ಸಂಸ್ಥಾನ ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ, ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ನಿವೃತ್ತ ಪ್ರಾಚಾರ್ಯ ದಯಾನಂದ ಶೀಲವಂತ, ಮಲ್ಲಿಕಾರ್ಜುನ ಹೊಳಕುಂದೆ, ಶ್ರೀನಿವಾಸ ಬಿರಾದಾರ, ಲೋಕೇಶ ಮೋಳಕೆರೆ, ಗೋವಿಂದರೆಡ್ಡಿ ಕೋತಾಪಲ್ಲೆ, ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಶೀಲವಂತ, ಶೀಲಾದೇವಿ ಲವಾರೆ ಇತತರಿದ್ದರು.

ಪ್ರೊ.ರುದ್ರೇಶ್ವರ ಗೋರ್ಟಾ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಅಲಗುಡೆ ನಿರೂಪಣೆ ಮಾಡದರು. ಮಲ್ಲಿಕಾರ್ಜುನ ಹಿರೇಮಠ ಪ್ರಾರ್ಥನಾಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net