ದೈಹಿಕ, ಮಾನಸಿಕ ಆರೋಗ್ಯದ ಸಮತೋಲನ ಅಗತ್ಯ

17 Dwd 6
Published on

ಧಾರವಾಡ: ಇಂದಿನ ಯುವಕರು ಹೆಚ್ಚಿನ ಸಮಯವನ್ನು ಜಡ ಜೀವನಶೈಲಿ, ಡಿಜಿಟಲï ಮಾಧ್ಯಮ ಹಾಗೂ ಜಂಕ್ ಆಹಾರಗಳಿಗೆ ಮಾರುಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯ ಸ್ಥಿರತೆಯನ್ನು ಕಳೆದುಕೊಂಡು ಖಿನ್ನತೆ, ಮಾದಕ ವ್ಯಸನಗಳಿಗೆ ಬಲಿಯಾಗಿz್ದÁರೆ. ಹದಿಹರೆಯದಲ್ಲಿ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಸಿöÃರೋಗ ಮತ್ತು ಪ್ರಸೂತಿ ತಜ್ಞ ವೈದ್ಯೆ ಡಾ. ಉಮಾ ಕಳಸೂರಮಠ ಹೇಳಿದರು.
ನಗರದ ಸಪ್ತಾಪುರದ ಎಂ.ಎನ್. ಪಾಟೀಲ ಎಜುಕೇಶನ್ -Ëಂಡೇಶನ್‌ನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಲೈಂಗಿಕ ಶಿಕ್ಷಣ: ಆರೋಗ್ಯ ಮತ್ತು ಸ್ವಚ್ಛತೆ' ಕುರಿತು ಅವರು ಉಪನ್ಯಾಸ ನೀಡಿದರು.
ಋತುಚಕ್ರ ಹೆಣ್ಣಿಗೆ ಸವಾಲಿನ ರೀತಿ ಕಾಡುವ ದೇಹದ ಪ್ರಕ್ರಿಯೆ. ಪ್ರೌಢಾವಸ್ಥೆ ಹೊಂದಿರುವ ಹೆಣ್ಣು ಮಕ್ಕಳಲ್ಲಿರುವ ಮುಟ್ಟಿನ ಸಮಸ್ಯೆಗಳ ಬಗ್ಗೆ ಅರಿವು ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದರು.
ನAತರ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿ ಸಂದೇಹಗಳಿಗೆ ಪರಿಹಾರ ನೀಡಿದರು.
ಪ್ರಾಚಾರ್ಯ ಶಿವಶಂಕರ ರಾವ್ ಎಚ್.ಬಿ. ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯೆ ನೇತ್ರಾವತಿ ಗಾಳಿಮಠ, ಇತರರಿದ್ದರು. ಸ್ವಾತಿ ಪ್ರಾರ್ಥಿಸಿದರು. ಶ್ರೀದೇವಿ ಶುಕ್ಲೆ ಸ್ವಾಗತಿಸಿದರು. ವರ್ಷಾ ಕುಲಕರ್ಣಿ ನಿರೂಪಿಸಿದರು. ಛಾಯಾ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net