

ಕುಮಟಾ: ಸ್ಥಳೀಯ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿ. ಕೃಷ್ಣ ಟಿ. ಭಾಗ್ವತ ದತ್ತಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕಿ ಡಾ. ನವ್ಯಾ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಜೀವರಾಶಿಯಿಂದ ಪಡೆದ ಕಾರ್ಬೋಹೈಡ್ರೇಟನ್ನು ಮೌಲ್ಯವರ್ಧಿತ ರಾಸಾಯನಿಕಗಳಾಗಿ ಪರಿವರ್ತಿಸುವ ವೇಗವರ್ಧಕದ ಅವಲೋಕನ (ಒವರ್ ವ್ಯೆ ಆಫ್ ದಿ ಕ್ಯಾಟಲಿಟಿಕ್ ಕನ್ವರ್ಶನ್ ಆಫ್ ಬಯೋಮಾಸ್ ಡಿರೈವ್ಡ ಕಾರ್ಬೋಹೈಡ್ರೇಟ್ ಟು ವ್ಯಾಲ್ಯುಎಡೆಡ್ ಕೆಮಿಕಲ್ಸ್) ವಿಷಯದ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎನ್.ಕೆ.ನಾಯಕ, ನಮ್ಮ ಕಾಲೇಜಿನ ರ‌್ಯಾಂಕ್ ವಿಜೇತ ಹಳೆಯ ವಿದ್ಯಾರ್ಥಿ ಚಿದಾನಂದ ಭಾಗ್ವತ (ಬಿ.ಟೆಕ್) ಅವರು ದಿ. ಕೃಷ್ಣ ಟಿ. ಭಾಗ್ವತ ಸ್ಮರಣೆಯಲ್ಲಿ 1.25 ಲಕ್ಷ ರೂ. ದತ್ತಿ ನಿಧಿ ಸ್ಥಾಪಿಸಿದ್ದರು. ದತ್ತಿ ನಿಧಿಯ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು. ಉಪನ್ಯಾಸ ನೀಡಿದ ನವ್ಯಾ ಭಟ್ ಅವರನ್ನು ಸನ್ಮಾನಿಸಲಾಯಿತು
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಬಾಂದೇಕರ ಸ್ವಾಗತಿಸಿದರು. ಸ್ವಾತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜನಾ ನಾಯ್ಕ ವಂದಿಸಿದರು. ಶ್ರೀನಿಧಿ ಹಾಗೂ ರುತ್ವಿಕ ನಾಯ್ಕ ನಿರೂಪಿಸಿದರು.