

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ದೇಶದ ಪ್ರತಿಷ್ಠಿತ ಆಭರಣ ತಯಾರಿಕಾ ಕಂಪನಿಗಳಲ್ಲಿ ಒಂದಾದ ಸಿ. ಕೃಷ್ಣಯ್ಯ ಚೆಟ್ಟಿ ಗ್ರುಪ್ ಆಫ್ ಜುವೆಲರ್ಸ್ ವತಿಯಿಂದ ನಗರದ ಗೋಕುಲ ರಸ್ತೆ ದಿ ಫರ್ನ್ ರೆಸಿಡೆನ್ಸಿಯಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನವರಾತ್ರಿ- ದಸರಾ ಹಿನ್ನೆಲೆಯಲ್ಲಿ ಕಲಾತ್ಮಕ ಹಾಗೂ ವಿಶೇಷ ವಿನ್ಯಾಸದ ಆಭರಣಗಳನ್ನು ಸಿ. ಕೃಷ್ಣಯ್ಯ ಚೆಟ್ಟಿ ಗ್ರುಪ್ ಪರಿಚಯಿಸುತ್ತಿದೆ. ಶುದ್ಧ ಚಿನ್ನದ ಆಭರಣಗಳು, ಮುತ್ತು, ರತ್ನಗಳು ಆಕರ್ಷಕವಾಗಿವೆ. ಸಂಸ್ಥೆಯು ತನ್ನ ಶ್ರೀಮಂತ ಪರಂಪರೆಯ ಬ್ರ್ಯಾಂಡ್ ಅನ್ನು ಹುಬ್ಬಳ್ಳಿಗೆ ತಂದಿರುವುದು ಸಂತೋಷದ ಸಂಗತಿ. ಹುಬ್ಬಳ್ಳಿ ಜನರು ಇದರ ಸದುಪಯೋಗ ಪಡೆಯಬೇಕು ಎಂದರು.
ಸ್ಟೋರ್ ಮ್ಯಾನೇಜರ್ ಕೆ.ಕೆ. ಪ್ರಸಾದ ಮಾತನಾಡಿ, ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳವು ಸೆ. 29ರವರೆಗೆ ಇರಲಿದೆ. ನಿತ್ಯ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ನಾವು ಹುಬ್ಬಳ್ಳಿಯಲ್ಲಿ ಪ್ರತಿ ಬಾರಿ ಇಂಥ ಪ್ರದರ್ಶನ ಏರ್ಪಡಿಸಿದಾಗಲೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಮತ್ತೆ ಮತ್ತೆ ಇಲ್ಲಿಗೆ ಬರಲು ಪ್ರೋತ್ಸಾಹಿಸುತ್ತಿದೆ. ಈ ರೀತಿ ಗ್ರಾಹಕರೊಂದಿಗೆ ನಾವು ಸಂಬಂಧ ಹೊಂದಿದ್ದೇವೆ ಎಂದು ಹೇಳಿದರು.
ಮೇಳದಲ್ಲಿ ಎಂದೂ ಕಂಡಿರದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳ ವಿಶೇಷ ಸಂಗ್ರಹಗಳಿವೆ. ಕ್ಲಾಸಿಕ್ನಿಂದ ಸಮಕಾಲೀನ ಟ್ರೆಂಡ್ವರೆಗೆ ಪ್ರತಿಯೊಬ್ಬರಿಗೂ ಪೂರಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬೆಳ್ಳಿ ಆಭರಣಗಳ ಖರೀದಿ ಮೇಲೆ ಶೇ. 2ರಷ್ಟು, ಚಿನ್ನದ ಆಭರಣಗಳ ಮೇಲೆ ಶೇ. 4ರಷ್ಟು , ವಜ್ರದ ಆಭರಣಗಳ ಮೇಲೆ ಶೇ. 6ರಷ್ಟು ಹಾಗೂ 18.69 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಖರೀದಿ ಮೇಲೆ ಶೇ. 9ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.