ಕಾಲಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

homa
spcial pooja
Published on

ಚನ್ನರಾಯಪಟ್ಟಣ: ಹೋಬಳಿಯ ಬೂದಿಗೆರೆ ಕಾಲಭೈರವೇಶ್ವರ ದೇವಾಲಯದಲ್ಲಿ ಕಾಲಭೈರವಾಷ್ಟಮಿ ಪ್ರಯುಕ್ತ ಮಹಿಳೆಯರಿಂದ ಸಹಸ್ರ ಲಲಿತ ನಾಮಾರ್ಚನೆ, ವಿಶೇಷ ಹೋಮ, ದೇವರಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಅನ್ನ ಸಂತರ್ಪಣೆ ನಡೆಯಿತು. ದೇವಾಲಯದ ಅರ್ಚಕ ಮಂಜುನಾಥ್ ಮಾತನಾಡಿ, ಪ್ರತಿವರ್ಷವೂ ಕಾಲಭೈರವಾಷ್ಟಮಿಯಲ್ಲಿ ಭಕ್ತರಿಂದ ವಿಶೇಷ ಪೂಜೆ, 108 ಕುಂಭಾಭಿಷೇಕ ಹಮ್ಮಿಕೊಂಡಿದ್ದು, ಶುಕ್ರವಾರ ಉಯ್ಯಲೋತ್ಸವ, ವಿವಿಧ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net