ವಿಶೇಷ ಆರೋಗ್ಯ ತಪಾಸಣೆ ಶಿಬಿರ ಡಿ. 23ರಿಂದ

free-medical-camp
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೆರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗೃದ್ರಸಿ (ಸಿಯಾಟಿಕಾ) ಮತ್ತದರ ಲಕ್ಷಣಗಳಾದ ಬೆನ್ನು ಮೂಳೆಯಿಂದ ಕಾಲಿನ ಕೆಳಗೆ ಹರಿಯುವ ನೋವು, ಜುಮ್ಮೆನ್ನುವುದು ಇತ್ಯಾದಿ ರೋಗದಿಂದ ಬಳಲುತ್ತಿರುವವರಿಗೆ ವಿಶೇಷ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರವನ್ನು ಡಿ. 23ರಿಂದ 28ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ 4ರವರೆಗೆ ಏರ್ಪಡಿಸಲಾಗಿದೆ. ಪಂಚಕರ್ಮ ವಿಭಾಗದಿಂದ ಈ ಶಿಬಿರ ನಡೆಯಲಿದೆ ಎಂದು ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net