ಡಿ.ಕೆ.ಶಿವಕುಮಾರ್​ಗೆ ಬಂಡೆ ಹಾರ; ಎಚ್​ಡಿಕೆಗೆ ವಿಶೇಷ ಹಾರ ಹಾಕಿ ಸ್ವಾಗತಿಸಿದ ಕಾರ್ಯಕರ್ತರು

FotoJet
Published on

ಬೆಂಗಳೂರು/ಶ್ರೀರಂಗಪಟ್ಟಣ: ರಾಜ್ಯ ವಿಧಾನಸಭೆ ಚುನಾವಣೇಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದ್ದು ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಚುನಾವಣೆ ಪ್ರಚಾರದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಗೂ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿಗೆ ವಿಶೇಷವಾದ ಹಾರಗಳನ್ನು ಹಾಕುವ ಮೂಲಕ ನೆಚ್ಚಿನ ನಾಯಕರನ್ನು ತಮ್ಮ ತಮ್ಮ ಕ್ಷೇತ್ರಕ್ಕೆ ಬರಮಾಡಿಕೊಂಡಿದ್ಧಾರೆ.

ಶ್ರೀರಂಗಪಟ್ಟಣದಲ್ಲಿ ಇಂದು ನಡೆದ ಪ್ರಜಾಧ್ವನಿ ಯಾತ್ರೆ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಡಿ.ಕೆ.ಶಿವಕುಮಾರ್​ ಅಭಿಮಾನಿಗಳು ಬಂಡೆ ಹಾರ ಹಾಗೂ ಪೈನಾಪಲ್​ ಹಾಕುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದು ವಿಶೇಷ ಎನ್ನಿಸಿತ್ತು.

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಗೆ ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಂದಿನಿ ಹಾಲು-ಮೊಸರು-ಮಜ್ಜಿಗೆ ಪ್ಯಾಕೆಟ್​ ಹಾಗೂ ಕ್ಯಾಪ್ಸಿಕಂನಿಂದ ತಯಾರಿಸಿದ್ದ ಹಾರಗನ್ನ ಹಾಕಿ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದಾರೆ.

ಸದ್ಯ ಇಂದಿನ ಕಾರ್ಯಕ್ರಮದಲ್ಲಿ ನಾಯಕರಿಗೆ ಹಾಕಿರುವ ಹಾರಗಳ ಪೋಟೋ ಹಾಗೂ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮುಖಂಡರು ಯಾವ ರೀತಿಯ ಹಾರ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net